Wednesday, August 17, 2022

Latest Posts

ಬಜೆಟ್ ನಲ್ಲಿ ಮೀಸಲಿಟ್ಟ ಹಣದಿಂದ ಸೋಂಕಿತರಿಗೆ 1 ಕೋಟಿ ಆರ್ಥಿಕ ನೆರವು ನೀಡಿ: ಆಯುಕ್ತರಿಗೆ ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್ ಮನವಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಶಿವಮೊಗ್ಗ:

ಕೋವಿಡ್ ಸಲುವಾಗಿ ಮಹಾನಗರಪಾಲಿಕೆಯ ಬಜೆಟ್ ನಲ್ಲಿ ಮೀಸಲಿಟ್ಟ ಮೂರು ಕೋಟಿ ರೂಪಾಯಿಗಳಲ್ಲಿ ಕೂಡಲೇ ಒಂದು ಕೋಟಿ ಬಿಡುಗಡೆ ಮಾಡಿ ಸೋಂಕಿತರಿಗೆ ಆರ್ಥಿಕ ನೆರವು ನೀಡುವಂತೆ ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್ ಆಯುಕ್ತರಿಗೆ ಮಂಗಳವಾರ ಮನವಿ ಮಾಡಿದ್ದಾರೆ.

ಪ್ರಸ್ತುತ ಕೋವಿಡ್ ನಿಂದಾಗಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ. ಬಡ ಹಾಗೂ ಮಧ್ಯಮ ವರ್ಗದವರ ಚಿಕಿತ್ಸೆಗೂ ಕಷ್ಟವಾಗುತ್ತಿದೆ. ತೀವ್ರ ಪೀಡಿತರಿಗೆ ಸಿಟಿ‌ ಸ್ಕ್ಯಾನ್ ಡಿ. ಡೈಮರ್ ಅಗತ್ಯ ಇರುತ್ತದೆ. ಇವನ್ನು ಮಾಡಿಸಲು ಹೆಚ್ಚು ಹಣ ಬೇಕಾಗುತ್ತದೆ. ಆದರೆ ಅರ್ಥಿಕ. ದುರ್ಬಲರಿಗೆ ಇದು ಕಷ್ಟವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ತೆಗೆದಿರಿಸಿರುವ 3 ಕೋಟಿ ಹಣದಲ್ಲಿ ತುರ್ತಾಗಿ ಒಂದು ಕೋಟಿ ಹಣವನ್ನು ಬಿಡುಗಡೆ ಮಾಡಿ ಸಿಟಿ ಸ್ಕ್ಯಾನ್ ಮಾಡಿಸಿದವರಿಂದ ರಶೀದಿ ಪಡೆದು ಅವರ ಖಾತೆಗೆ 2 ಸಾವಿರ ರೂ. ಸಂದಾಯ ಮಾಡುವಂತೆ ಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!