ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಾಳೆಹಣ್ಣು ಸಿಪ್ಪೆ ಆರೋಗ್ಯಕ್ಕೆ ಮಾತ್ರವಲ್ಲ, ಈ ರೀತಿ ಬಳಸಿದ್ರೆ ಸೌಂದರ್ಯ ಕೂಡ ವೃದ್ಧಿಯಾಗುತ್ತೆ! ಹೇಗೆ ನೋಡಿ…

ನಾವೆಲ್ಲರೂ ಹಾಗೆಯೇ ಬಾಳೆಹಣ್ಣನ್ನು ತಿಂದು ಸಿಪ್ಪೆಯನ್ನು ಎಸೆಯುತ್ತೇವೆ. ಬಾಳೆಹಣ್ಣನ್ನು ತಿಂದರೆ ಎಷ್ಟು ಪ್ರೊಟೀನ್ ಸಿಗುತ್ತದೆಯೋ ಅದಕ್ಕಿಂತಲೂ ಹೆಚ್ಚಿನ ಪ್ರೊಟೀನ್ ಅದರ ಸಿಪ್ಪೆಯಲ್ಲಿ ಇರುತ್ತದೆ. ಆದರೆ ಬಾಳೆಹಣ್ಣಿನಷ್ಟು ರುಚಿ ಬಾಳೆಹಣ್ಣಿನಲ್ಲಿ ಸಿಪ್ಪೆಯಲ್ಲಿರುವುದಿಲ್ಲ. ಈ ಸಿಪ್ಪೆ ಹಲವು ಚರ್ಮ ರೋಗಗಳಿಗೆ ಸಂಜೀವಿನಿ ಇದು. ಇದರ ಮಹತ್ವ ಈ ಕೆಳಗಿದೆ ಓದಿರಿ.

  • ಚರ್ಮ ರೋಗ: ಬಾಳೆಯಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ 6 ಮತ್ತು ವಿಟಮಿನ್ 12 ಇದೆ. ಪೊಟ್ಯಾಸಿಯಂ, ನಾರಿನಾಂಶ ಮತ್ತು ಪ್ರೊಟೀನ್ ಕೂಡ ಇದೆ. ಇದನ್ನು ದಿನವೂ ಸೇವಿಸಿದರೆ ಚರ್ಮ ರೋಗದ ಸಮಸ್ಯೆ ನಿವಾರಣೆಯಾಗುತ್ತದೆ. ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
  • ಮೊಡವೆ: ಮುಖದಲ್ಲಿ ಮೊಡವೆಗಳಿದ್ದಾಗ ಬಾಳೆಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಿಡಿ. ನಂತರ ತೊಳೆದುಕೊಳ್ಳಿ. ಮೊಡವೆಗಳು ಹೋಗುತ್ತವೆ, ಮತ್ತು ಮೊಡವೆ ಕಲೆಗಳೂ ಹೋಗುತ್ತದೆ.
  • ತುರಿಕೆ: ಸೋರಿಯಾಸಿಸ್ ಉಂಟಾದ ಜಾಗದಲ್ಲಿ ಬಾಳೆಹಣ್ಣಿನ ಸಿಪ್ಪೆಯನ್ನು ಹಚ್ಚಿ. ಅದರಲ್ಲಿರುವ ಮಾಯಿಶ್ಚರೈಸರ್ ಗುಣಗಳು ತುರಿಕೆಯನ್ನು ನಿವಾರಿಸುತ್ತದೆ.
  • ಹಳಸಿ ಹಲ್ಲು: ಹಳದಿ ಹಲ್ಲುಗಳಿರುವವರು ಬಾಳೆಹಣ್ಣಿನ ಸಿಪ್ಪೆಯನ್ನು ಹಲ್ಲಿಗೆ ಹಚ್ಚಿಕೊಂಡು ಚೆನ್ನಾಗಿ ತಿಕ್ಕಿ, ನಂತರ ಹತ್ತು ನಿಮಿಷ ಹಾಗೆಯೇ ಬಿಡಿ. ಒಂದು ವಾರದವೆರೆಗೂ ದಿನವೂ ಹೀಗೆ ಮಾಡಿ. ಬೇಗ ಹಲ್ಲು ಬಿಳಿಯಾಗುತ್ತದೆ.
  • ಸುಕ್ಕು: ಮುಖದ ಮೇಲಿನ ಸುಕ್ಕುಗಳನ್ನು ತೆಗೆಯಲು ಬಾಳೆಹಣ್ಣಿನ ಸಿಪ್ಪೆಗೆ ಜೇನು ತುಪ್ಪವನ್ನು ಸೇರಿಸಿಕೊಂಡು ಅದನ್ನು ಒಂದು ವಾರದವರೆಗೂ ಮುಖಕ್ಕೆ ಹಚ್ಚಿಕೊಳ್ಳಬೇಕು. ಹೀಗೆ ಮಾಡಿದರೆ ಮುಖದ ಸುಕ್ಕು ಹೋಗುತ್ತದೆ.
  • ಎಣ್ಣೆ ಅಂಶ: ಮುಖದಲ್ಲಿ ಎಣ್ಣೆ ಅಂಶ ಇರುವವರು ಅಥವಾ ಒಣ ತ್ವಚೆ ಇರುವವರು ಬಾಳೆಹಣ್ಣಿನ ಸಿಪ್ಪೆಯನ್ನು ರುಬ್ಬಿಕೊಂಡು ಅದಕ್ಕೆ ಹಾಲಿನ ಕೆನೆಯನ್ನು ಹಾಕಿ ಮಿಕ್ಸ್ ಮಾಡಿಕೊಂಡು ಮುಖಕ್ಕೆ ಹಚ್ಚಬೇಕು.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss