ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, June 21, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಇನ್ಮುಂದೆ ಕೊಬ್ಬರಿ ಎಣ್ಣೆ ಮಾತ್ರವಲ್ಲ, ಲವಂಗದ ಎಣ್ಣೆಯನ್ನೂ ಬಳಸಿ… ಇದರಲ್ಲಿ ಎಷ್ಟೊಂದು ಆರೋಗ್ಯಕರ ಗುಣಗಳಿವೆ ಗೊತ್ತಾ?

ನಾವು ಬಳಸುವ ಪ್ರತಿಯೊಂದು ಸಾಂಬಾರು ಪದಾರ್ಥದಲ್ಲಿಯೂ ಆರೋಗ್ಯಕರ ಗುಣವಿದೆ. ಹಾಗೆಯೇ ಲವಂಗದಲ್ಲಿಯೂ ಕೂಡು. ಹಾಗೇ ಲವಂಗವನ್ನು ಬಳಸುವ ಬದಲು ಲವಂಗದ ಎಣ್ಣೆಯನ್ನು ಬಳಸಿದರೆ ಆರೋಗ್ಯ ಮತ್ತಷ್ಟು ವೃದ್ಧಿಯಾಗುತ್ತದೆ. ಲವಂದ ಎಣ್ಣೆಯ ಉಪಯೋಗ ಇಲ್ಲಿದೆ ನೋಡಿ..

ಹಲ್ಲು ನೋವು:
ಲವಂಗದ ಎಣ್ಣೆಯನ್ನು ಹಲ್ಲುಜ್ಜುವ ಪೇಸ್ಟ್ ಜೊತೆ ಬೆರೆಸಿಕೊಂಡು ಉಜ್ಜಿದರೆ ಹಲ್ಲು ನೋವು ನಿವಾರಣೆಯಾಗುತ್ತದೆ.

ಮೃದು ಚರ್ಮ:
ಎರಡರಿಂದ ಮೂರು ಹನಿಗಳಷ್ಟು ಲವಂಗ ಎಣ್ಣೆಯನ್ನು ಒಂದು ಚಮಚ ಜೇನುತುಪ್ಪದೊಂದಿಗೆ ಸೇರಿಸಿ ಹಚ್ಚಿಕೊಂಡರೆ ಚರ್ಮ ಮೃದುವಾಗುತ್ತದೆ. ಕಲೆ ಕೂಡ ನಿವಾರಣೆಯಾಗುತ್ತದೆ.

ತಲೆನೋವು:
ಲವಂಗದ 4 ಹನಿ ಎಣ್ಣೆಗೆ ಸ್ವಲ್ಪ ಉಪ್ಪು ಸೇರಿಸಿಕೊಂಡು ಹಣೆಗೆ ಹಚ್ಚಿಕೊಂಡರೆ ತಲೆನೋವು ನಿವಾರಣೆಯಾಗುತ್ತದೆ.

ಚರ್ಮ ರೋಗ:
ಚರ್ಮ ಸಿಕ್ಕು ಗಟ್ಟುವುದು, ಮೊಡವೆ, ಕಲೆ, ಹೀಗೆ ನಾನಾ ರೀತಿಯ ಚರ್ಮ ರೋಗಕ್ಕೆ ಲವಂಗದ ಎಣ್ಣೆ ರಾಮಬಾಣ. ಹಾಲಿನ ಕೆನೆಗೆ ಲವಂಗದ ಎಣ್ಣೆಯನ್ನು ಬೆಸರಿಕೊಂಡು ಚರ್ಮಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು.

ಮಧುಮೇಹ:
ಮಧುಮೇಹಿಗಳಲ್ಲಿ ಇನ್ಸುಲಿನ್ ಮಟ್ಟ ಕಡಿಮೆ ಇರುತ್ತದೆ. ಲವಂಗದ ಎಣ್ಣೆ ಇನ್ಸುಲಿನ್ ಮಟ್ಟ ಸರಿ ಪ್ರಮಾಣದಲ್ಲಿ ಇರಲು ಸಹಾಯ ಮಾಡುವುದು. ಜೊತೆಗೆ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು.

ನೋವು:
ಕೈ, ಕಾಲು, ಗಂಟು, ಮಂಡಿ ಹೀಗೆ ಒಂದಿಲ್ಲೊಂದು ಭಾಗ ನೋವು ಎನ್ನುವವರು ಲವಂಗದ ಎಣ್ಣೆ ಟ್ರೈ ಮಾಡಿ. ನೋವಿರುವ ಜಾಗಕ್ಕೆ ಲವಂಗದ ಎಣ್ಣೆ ಹಚ್ಚಿಕೊಂಡು ಮಸಾಜ್ ಮಾಡಿಕೊಳ್ಳಿ. ನಂತರ ಬಿಸಿ ನೀರಿನ ಶಾಖ ಕೊಟ್ಟುಕೊಳ್ಳಿ.

ರೋಗನಿರೋಧಕ ಶಕ್ತಿ:
ಇದು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಶೀತ ಮತ್ತು ಜ್ವರ ಮುಂತಾದ ಕಾಯಿಲೆಗಳು ಮತ್ತು ಸೋಂಕುಗಳನ್ನು ದೂರವಿಡಲು ಸಹಾಯ ಮಾಡುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss