ತಿರುಪತಿ ಲಡ್ಡುವಿನಲ್ಲಿ ಕೊಬ್ಬು ಬಳಕೆ: ಪವನ್​ ಕಲ್ಯಾಣ್ ಮಾತಿಗೆ ನಟ ಪ್ರಕಾಶ್​ ರಾಜ್​ ಕೌಂಟರ್​!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ತಿರುಪತಿ ದೇಗುಲದ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಕೆ ಮಾಡಲಾಗಿದೆ ಎಂದು ಆಂಧ್ರದ ಸಿಎಂ ಚಂದ್ರಬಾಬು ನಾಯ್ಡು ಹೇಳಿದ ಬಳಿಕ ತಿಮ್ಮಪ್ಪನ ಪ್ರಸಾದ ಲಡ್ಡುವಿಗೆ ಬಳಸೋ ತುಪ್ಪದಲ್ಲಿ ಮೀನಿನ ಎಣ್ಣೆ, ಬೀಫ್ ಟ್ಯಾಲೋ ಮತ್ತು ಹಂದಿ ಕೊಬ್ಬು ಇತ್ತು ಎಂದು ಲ್ಯಾಬ್​ ರಿಪೋರ್ಟ್​ ಧೃಡಪಡಿಸಿತ್ತು.

ಈ ಬೆನ್ನಲ್ಲೇ ಎಚ್ಚೆತ್ತ ಆಂಧ್ರದ ಡಿಸಿಎಂ ಪವನ್​ ಕಲ್ಯಾಣ್​​​ ಅವರು ಈ ಬಗ್ಗೆ ಟ್ವೀಟ್​ ಮಾಡಿ, ಇದಕ್ಕೆ ಕಾರಣರಾದವರನ್ನು ಕೂಡಲೇ ಅರೆಸ್ಟ್​ ಮಾಡಿ ಕಠಿಣ ಶಿಕ್ಷೆ ನೀಡಲಿದ್ದೇವೆ. ಹಿಂದಿನ ಜಗನ್​ ಸರ್ಕಾರ ರಚಿಸಿದ ಟಿಟಿಡಿ ಬೋರ್ಡ್​​ ಸದಸ್ಯರು ಇದಕ್ಕೆ ಉತ್ತರ ನೀಡಬೇಕು ಎಂದಿದ್ದರು. ಅಷ್ಟೇ ಅಲ್ಲ ದೇಶದ ಎಲ್ಲಾ ದೇವಾಲಯಗಳ ರಕ್ಷಣೆಗೆ ಸನಾತನ ಧರ್ಮ ರಕ್ಷಣಾ ಬೋರ್ಡ್​ ರಚನೆ ಆಗಬೇಕು. ಇದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗಬೇಕು ಎಂದಿದ್ದರು. ಇದಕ್ಕೀಗ ನಟ ಪ್ರಕಾಶ್​ ರಾಜ್​ ಕೌಂಟರ್​ ನೀಡಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರೋ ನಟ ಪ್ರಕಾಶ್​​ ರಾಜ್​​, ಡಿಸಿಎಂ ಪವನ್​ ಕಲ್ಯಾಣ್​ ಅವರೇ ಆಂಧ್ರದಲ್ಲಿ ನಿಮ್ಮದೇ ಸರ್ಕಾರ ಇದೆ. ಆದಷ್ಟು ಬೇಗ ತಪ್ಪಿತಸ್ಥರನ್ನು ಹುಡುಕಿ ಶಿಕ್ಷೆ ಕೊಡಿ. ಈಗಾಗಲೇ ಹಲವು ಕೋಲು ಗಲಭೆಗಳು ದೇಶದಲ್ಲಿ ನಡೆಯುತ್ತಿದೆ. ಇದಕ್ಕೆ ನೀವು ಕೋಮು ಬಣ್ಣ ಕಟ್ಟಿ ದೇಶಾದ್ಯಂತ ಗಲಭೆ ಎಬ್ಬಿಸಬೇಡಿ ಎಂದು ಹೇಳಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

7 COMMENTS

  1. ದೇವಸ್ಥಾನ ಜಾತ್ಯಾತೀತ ಸ್ಥಳವಲ್ಲ ಅಂತ ಈ ಗುಬಾಲ ಪಕ್ಯನಿಗೆ ಹೇಳೋಕೆ ಆಗುತ್ತಾ?

  2. ಈ ಪ್ರಕಾಶ್ ರಾಯ್ ಒಬ್ಬ ಅಯೋಗ್ಯ, ಕಲ್ಲು ಎಸೆತಗಾರರ ಬಗ್ಗೆ ಮಾತನಾಡಿಲ್ಲಾ ಇಲ್ಲಿ‌‌ ಬಂದು ಮಾತನಾಡುತ್ತಿದ್ದಾನೆ

  3. Prakash ಅವರೇ ನಿಮಗೆ ಅಷ್ಟು ಸಾಮಾಜಿಕ ಕಲಿ ಕಲಿ ಇದ್ದರೆ
    ದಿ ದಿ ಗೆ ಹೇಳಿ. doctor ಗೆ ಆಗಿರೊದ ಬಗ್ಗೆ ಮಾತಾಡಲಿಲ್ಲಾ

  4. ಪ್ರಕಾಶ್ ರಾಜ್ ವೆಂಕಟೇಶ್ಬರನ ಭಕ್ತ ಅಲ್ಲ.‌ ಜಗನ್ ಭಕ್ತ.‌‌ತಿರುಪತಿ ಬಗ್ಗೆ ಮಾತಾಡೋದು ಬೇಕಿಲ್ಲ..‌ರಾಜಕೀಯ ಅಷ್ಟೇ ಸಾಕು

LEAVE A REPLY

Please enter your comment!
Please enter your name here

error: Content is protected !!