ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, June 24, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೂಸಂಬಿ ತಿಂದು ಸಿಪ್ಪೆ ಎಸೆಯುತ್ತೀರಾ? ಇದನ್ನು ಓದಿದ್ರೆ ಇನ್ಮುಂದೆ ಈ ತಪ್ಪು ಎಂದಿಗೂ ಮಾಡೋದಿಲ್ಲ!!

ಮೂಸಂಬಿ ಹಣ್ಣಿಗಿಂತ ಅದರ ಸಿಪ್ಪೆಯಲ್ಲಿಯೇ ಅಧಿಕ ಪ್ರಮಾಣದ ಪೋಷಕಾಂಶವಿರುತ್ತದೆ. ಮೂಸಂಬಿ ಹಣ್ಣು ತಿಂದು ಇನ್ಮುಂದೆ ಸಿಪ್ಪೆಯನ್ನು ಎಸೆಯಬೇಡಿ. ಮೂಸಂಬಿ ಸಿಪ್ಪೆ ಬಿಸಿಲಿಗೆ ಚೆನ್ನಾಗಿ ಒಣಗಿಸಿಟ್ಟರೆ ವರ್ಷದವರೆಗೂ ಚೆನ್ನಾಗಿರುತ್ತದೆ. ಈ ಸಿಪ್ಪೆಯಿಂದ ಏನೆಲ್ಲ ಉಪಯೋಗವಿದೆ ತಿಳಿಯಿರಿ…

ಕೊಲೆಸ್ಟ್ರಾಲ್:
ಮೂಸಂಬಿ ಸಿಪ್ಪೆಗಳನ್ನು ತೆಳುವಾಗಿ ಹೆಚ್ಚಿ ನಿಮ್ಮ ಆಹಾರದಲ್ಲಿ ಕೊಂಚ ಪ್ರಮಾಣದಲ್ಲಿ ಸೇರಿಸುವುದರಿಂದ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸಬಹುದು.

ಕ್ಯಾನ್ಸರ್ ವಿರುದ್ಧ ಹೋರಟ:
ಮೂಸಂಬಿ ಸಿಪ್ಪೆಯಲ್ಲಿ ಫೈಬರ್ ಮತ್ತು ವಿಟಮಿನ್ ಎ ಇರುತ್ತದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಈ ಸಿಪ್ಪೆಯನ್ನು ಒಣಗಿಸಿ ಪುಡಿಮಾಡಿಕೊಂಡು ಜೇನುತುಪ್ಪದೊಂದಿಗೆ ಸೇವಿಸಿದರೆ ಒಳ್ಳೆಯದು.

ಕಣ್ಣು ಶುದ್ಧಿ:
ಮೂಸಂಬಿ ಫ್ರೆಶ್ ಇದ್ದರೆ ಅದರಿಂದ ಸೊನೆ ಬರುತ್ತದೆ. ಅದನ್ನು ಕಣ್ಣಿಗೆ ಸಿಡಿಸಿಕೊಂಡರೆ ಕಣ್ಣು ಶುದ್ಧವಾಗುತ್ತದೆ.

ಮಲಬದ್ಧತೆ:
ಮೂಸಂಬಿ ಸಿಪ್ಪೆಯಲ್ಲಿ ಶೇಖಡಾ ಹನ್ನೊಂದರಷ್ಟು ಕರಗದ ನಾರು ಇದೆ. ಇದು ಮಲಬದ್ದತೆಯಾಗುವುದನ್ನು ತಡೆಯುತ್ತದೆ. ಸುಲಲಿತ ಮಲವಿಸರ್ಜನೆ, ಜೀರ್ಣಕ್ರಿಯೆಯಲ್ಲಿ ಸುಧಾರಣೆ ಕಂಡುಬರುತ್ತದೆ. ಮೂಸಂಬಿ ಸಿಪ್ಪೆಯನ್ನು ಹಾಗೇ ತಿನ್ನಬಹುದು

ಮೊಡವೆ:
ಮುಖದ ಮೇಲಿನ ಮೊಡವೆಗಳನ್ನು ಮೂಸಂಬಿ ಸಿಪ್ಪೆ ದೂರಮಾಡುತ್ತದೆ. ಮೂಸಂಬಿ ಸಿಪ್ಪೆಯನ್ನು ಬಿಸಿಲಿಗೆ ಒಣಗಿಸಿಡಬೇಕು. ನಂತರ ಅದನ್ನು ಪುಡಿ ಮಾಡಿಕೊಂಡು, ಕಡಲೆಹಿಟ್ಟಿನ ಜೊತೆ ಬೆರೆಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮೊಡವೆ ನಿವಾರಣೆಯಾಗುತ್ತದೆ.

ಟ್ಯಾನ್:
ಬಿಸಿಲಿನ ಕಾರಣದಿಂದ ಚರ್ಮ ಕಪ್ಪಗಾಗಿದ್ದರೆ ಆ ಸ್ಥಳದಲ್ಲಿ ಮೂಸಂಬಿ ಸಿಪ್ಪೆಯನ್ನು ಅರೆದು ತಯಾರಿಸಿದ ಲೇಪನವನ್ನು ಹಚ್ಚುವದರಿಂದ ಉತ್ತಮ ಪರಿಣಾಮಗಳನ್ನು ಪಡೆಯಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss