Monday, August 8, 2022

Latest Posts

ಇನ್ಮುಂದೆ ‘ಬ್ಯಾಟ್ಸ್‌ಮನ್’ ಪದ ಬದಲು ‘ಬ್ಯಾಟರ್’ ಪದಬಳಕೆ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕ್ರಿಕೆಟ್‌ನಲ್ಲಿ ‘ಬ್ಯಾಟ್ಸ್‌ಮನ್’ ಎಂಬ ಪದಬಳಕೆ ಬದಲು ‘ಬ್ಯಾಟರ್’ ಎಂಬ ಪದ ಇನ್ನುಮುಂದೆ ಬಳಕೆಯಾಗಲಿದೆ.
ಲಿಂಗಸಮಾನತೆ ಸೂಚಿಸುವ ಬ್ಯಾಟರ್ ಪದಬಳಕೆ ಸಂಬಂಧ ನಿಯಮ ರೂಪಿಸಲಾಗಿದ್ದು, ಬದಲಾವಣೆ ತಕ್ಷಣದಿಂದಲೇ ಜಾರಿಯಾಗಲಿದೆ ಎಂದು ಮೆರಿಲ್‌ಬಾರ್ನ್ ಕ್ರಿಕೆಟ್ ಕ್ಲಬ್ ತಿಳಿಸಿದೆ.
ಮಹಿಳಾ ಕ್ರಿಕೆಟ್ ಇತ್ತೀಚಿನ ವರ್ಷಗಳಲ್ಲಿ ಉತ್ತಮ ಹೆಸರು ಗಳಿಸುತ್ತಿದೆ. ಬ್ಯಾಟಿಂಗ್ ಮಾಡುವ ಮಹಿಳೆಯರನ್ನು ಸೂಚಿಸಲು ಸೂಕ್ತ ಪದ ಜಾರಿಯಲ್ಲಿರಲಿಲ್ಲ.
ಮಹಿಳಾ ಕ್ರಿಕೆಟ್‌ನಲ್ಲಿ ಬ್ಯಾಟರ್ ಎಂಬ ಪದ ಜಾರಿಯಲ್ಲಿದ್ದರೂ ಬ್ಯಾಟ್ಸ್‌ಮನ್ ಎನ್ನುವ ಪದಕ್ಕೆ ಹೆಚ್ಚಿನ ಮನ್ನಣೆ ಸಿಗುತ್ತಿತ್ತು. ಹೀಗಾಗಿ ಬ್ಯಾಟಿಂಗ್ ಮಾಡುವ ಮಹಿಳಾ ಹಾಗೂ ಪುರುಷರಿಗಾಗಿ ಒಂದೇ ಪದಬಳಕೆ ಮಾಡಲು ನಿರ್ಧಾರ ಮಾಡಲಾಗಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss