Monday, July 4, 2022

Latest Posts

ಪಾರಿಜಾತವನ್ನು ಈ ರೀತಿಯಾಗಿ ಬಳಸಿದರೆ ನಿಮ್ಮ ಆರೋಗ್ಯದಲ್ಲಿ ಬದಲಾವಣೆ ಖಂಡಿತ!! ಇಲ್ಲಿದೆ ಪಾರಿಜಾತದ ಆರೋಗ್ಯಕರ ಉಪಯೋಗ…

ಪಾರಿಜಾತ ಹೂವಿನ ಹಿಂದೆ ಪೌರಣಿಕ ಕತೆಯೊಂದಿದೆ. ಪಾರಿಜಾತಕ ಎಂಬ ನಾರಿ ಸೂರ್ಯನನ್ನು ಪ್ರೀತಿಸುತ್ತಾಳೆ ಆದರೆ ಸೂರ್ಯ ಅವಳ ಪ್ರೀತಿಯನ್ನು ತಿರಸ್ಕರಿಸುತ್ತಾನೆ. ಇದರಿಂದ ಮನ ನೊಂದ ಪಾರಿಜಾತ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅವಳ ದೇಹದ ಬೂದಿಯಿಂದ ಪಾರಿಜಾತ ಉದ್ಭವಿಸುತ್ತದೆ. ಈ ಪಾರಿಜಾತದ ಹೂವು ಆರೋಗ್ಯಕ್ಕೆ ಬಹಳ ಲಾಭಕಾರಿ.. ಏನು ಎಂಬುದು ನೋಡಿ…

ಸೌಂದರ್ಯ:
ಪಾರಿಜಾತದ ಬೀಜಗಳನ್ನು ಕುಟ್ಟಿ ಪುಡಿ ಮಾಡಿಕೊಂಡು ನಂತರ ಅದನ್ನು ಹಾಲಿನೊಂದಿಗೆ ಮಿಕ್ಸ್ ಮಾಡಿಕೊಂಡು ಮುಖಕ್ಕೆ ಹಚ್ಚುವುದರಿಂದ ಸೌಂದರ್ಯ ವೃದ್ಧಿಯಾಗುತ್ತದೆ.

ಸಂಧಿನೋವು:
ಪಾರಿಜಾತದ 5 ಎಲೆಯನ್ನು ನೀರು ಮತ್ತು ಕಾಳು ಮೆಣಸಿನೊಂದಿಗೆ ಕುದಿಸಿ ಕುಡಿಯುವುದರಿಂದ ಸಂಧಿವಾತ ನಿವಾರಣೆಯಾಗುತ್ತದೆ.

ರೋಗ ನಿರೋಧಕ:
ಪಾರಿಜಾತ ಎಲೆಯನ್ನು ಬರಿ ಬಾಯಿಯಲ್ಲಿ ಜಗಿದು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಜಂತು ಹುಳು:
ಮಕ್ಕಳಿಗೆ ಆಗಾಗ ಪಾರಿಜಾತ ಎಲೆಯನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಕಾಲು ಕಪ್ ಸೇವಿಸುವುದಕ್ಕೆ ಕೊಡಿ. ಇದರಿಂದ ಜಂತು ಹುಳು ನಿವಾರಣೆಯಾಗುತ್ತದೆ.

ಒಳ ಜ್ವರ ಮತ್ತು ಕೆಮ್ಮು:
ಕೆಮ್ಮು ಒಳ ಜ್ವರ ಇದ್ದರೆ ಪಾರಿಜಾತದ 3 ಎಲೆ, ತುಳಸಿ 5 ಎಲೆ, ಕಾಳು ಮೆಣಸು ಚಿಟಿಕೆ, ಬೆಲ್ಲ ಎರಡು ಚಮಚ. ಇವೆಲ್ಲವನ್ನೂ 2 ಕಪ್ ನೀರಿನೊಂದಿಗೆ ಚೆನ್ನಾಗಿ ಕುದಿಸಿ. ಅದು ಒಂದು ಕಪ್ ಆಗುವವರೆಗೂ ಕುದಿಸಿ. ನಂತರ ದಿನದಲ್ಲಿ ಮೂರು ಹೊತ್ತು ಸೇವಿಸಿದೆ ಕೆಮ್ಮು, ಜ್ವರ ಕಡಿಮೆ ಆಗುತ್ತದೆ.

ಕಾಮಾಲೆ:
ಪಾರಿಜಾತದ ಬೀಜವನ್ನು ಕುಟ್ಟಿ ಪುಡಿ ಮಾಡಿಕೊಂಡು ಅದನ್ನು ನೀರಿಗೆ ಬೆರೆಸಿಕೊಂಡು ಸೇವಿಸುವುದರಿಂದ ಕಾಮಾಲೆ ರೋಗ ನಿವಾರಣೆಯಾಗುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss