MISS UNIVERSE | ಮಂಗಳೂರು ಬೆಡಗಿಗೆ ನಿರಾಸೆ: ಯುಎಸ್‌ನ ಬೋನಿ ಗೆಬ್ರಿಯಲ್‌ಗೆ ವಿಶ್ವ ಸುಂದರಿ ಪಟ್ಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಅಮೆರಿಕಾ ಲೌಸಿಯಾನಾ ರಾಜ್ಯದ ನ್ಯೂ ಆರಿಲಿನ್ಸ್ ನಗರದ ಎರ್ನೆಸ್ಟ್ ಎನ್ ಮೋರಿಯಲ್ ಕನ್ವೆನ್ಷನ್ ಸೆಂಟರ್‌ನಲ್ಲಿ 71 ನೇ ಭುವನ ಸುಂದರಿ ಸ್ಪರ್ಧೆ ನಡೆದಿದೆ.

ಈ ಬಾರಿ ವಿಶ್ವ ಸುಂದರಿ ಪಟ್ಟವನ್ನು ಯುಎಸ್‌ನ ಆರ್, ಬೋನಿ ಗೇಬ್ರಿಯಲ್ ಅಲಂಕರಿಸಿದ್ದಾರೆ. ಭಾರತದ ದಿವಿತಾ ರೈ ವಿಶ್ವ ಸುಂದರಿ ಪಟ್ಟದಿಂದ ವಂಚಿತರಾಗಿದ್ದಾರೆ.

ಟಾಪ್ 16 ರ ಸ್ಥಾನದಲ್ಲಿದ್ದ ದಿವಿತಾ ರೈ ಅವರು ಕೊನೆಯ ಹಂತದಲ್ಲಿ ಸ್ಪರ್ಧೆಯಿಂದ ಹೊರಬಂದಿದ್ದಾರೆ. ಈ ಹಿಂದೆ ದಿವಿತಾ ಮಿಸ್ ಡೀವಾ ಯೂನಿವರ್ಸ್ ಸ್ಪರ್ಧೆಯಲ್ಲಿ ಗೆದ್ದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!