Saturday, August 13, 2022

Latest Posts

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಡಲ ಅಬ್ಬರ ತೀವ್ರ: ಜುಲೈ 15 ರ ವರೆಗೆ ರೆಡ್ ಅಲರ್ಟ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸ ದಿಗಂತ ವರದಿ, ಅಂಕೋಲಾ:

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿದ್ದ ಮಳೆಯ ಆರ್ಭಟ ಕೊಂಚ ಕಡಿಮೆಯಾದರೂ ಮಳೆ ಬಿರುಗಾಳಿ ಕಾರಣದಿಂದ ಕಡಲ ಅಬ್ಬರ ತೀವ್ರವಾಗಿದ್ದು ಜುಲೈ 15 ರ ವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಅಲೆಗಳ ಹೊಡೆತಕ್ಕೆ ಜಿಲ್ಲೆಯ ಹಲವು ಭಾಗಗಳಲ್ಲಿ ಗಿಡಮರಗಳು ಬುಡ ಸಮೇತ ಕಿತ್ತು ಹೋಗಿರುವುದಾಗಿ ತಿಳಿದು ಬಂದಿದ್ದು ಮೀನುಗಾರರು ಸೇರಿದಂತೆ ಯಾರೂ ಸಹ ಕಡಲ ತೀರದಲ್ಲಿ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.
ಪ್ರವಾಸಿಗರೇ ಹುಷಾರ್
ಲಾಕ್ ಡೌನ್ ತೆರುವುಗೊಂಡ ನಂತರ ಜಿಲ್ಲೆಯ ಕರಾವಳಿ ಮಲೆನಾಡು ಪ್ರದೇಶದ ಪ್ರವಾಸಿ ತಾಣಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು ಕಡಲ ತೀರಗಳಿಗೆ,ಜಲಪಾತ, ನದಿ ತೀರದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದಾರೆ ಇತ್ತೀಚಿನ ದಿನಗಳಲ್ಲಿ
ಸಮುದ್ರ ಭಯಾನಕ ಸ್ವರೂಪ ಪಡೆದುಕೊಂಡಿದ್ದು ಕಡಲಿಗಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂತಹ ಪರಿಣಿತರಿಂದಲೂ ರಕ್ಷಣೆ ಮಾಡುವುದು ಕಷ್ಟದ ಕೆಲಸ ಎಂದು ಪ್ರವಾಸಿಗರು ಅರಿಯುದು ಅಗತ್ಯವಾಗಿದೆ.
ಜಿಲ್ಲೆಯ ಕಾರವಾರ, ಗೋಕರ್ಣ, ಮುರ್ಡೇಶ್ವರ ಕಡಲ ತೀರಗಳಲ್ಲಿ ಸ್ಥಳೀಯರು ಎಚ್ಚರಿಕೆ ನೀಡಿದರೂ ಪ್ರಕ್ಷುಬ್ದ ಕಡಲ ತೀರದಲ್ಲಿ ಆಟವಾಡುವ ದುಸ್ಸಾಹಸಕ್ಕೆ ಹಲವರು ಇಳಿಯುವುತ್ತಿರುವುದು ಕಂಡು ಬರುತ್ತಿದ್ದು ಕೆಲವೇ ದಿನಗಳ ಹಿಂದೆ ಮುರ್ಡೇಶ್ವರ ಕಡಲ ತೀರದಲ್ಲಿ ಇಬ್ಬರು ಪ್ರವಾಸಿಗರು ಕೊಚ್ಚಿ ಹೋಗಿರುವ ಘಟನೆ ಸಂಭವಿಸಿದೆ.
ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ಜಲಪಾತಗಳು ಸೇರಿದಂತೆ ಅರಣ್ಯ ಪ್ರದೇಶದಲ್ಲಿ ಸೃಷ್ಟಿಯಾಗುವ ಹಲವು ಸಣ್ಣ ಪುಟ್ಟ ಜಲಪಾತಗಳಿಗೆ
ಭೇಟಿ ನೀಡುವ ಪ್ರವಾಸಿಗರು ಜಲಪಾತದ ಕೆಳಗಿನ ಆಳದ ಸ್ಥಳದಲ್ಲಿ, ನದಿ ಮೂಲಗಳಲ್ಲಿ
ಈಜಾಡುವುದು, ಜಾರು ಬಂಡೆಗಳ ಮೇಲೆ ಮೊಬೈಲ್ ಸೆಲ್ಫಿಯಂತ ಪ್ರಯತ್ನಕ್ಕೆ ಸದ್ಯದ ಪರಿಸ್ಥಿತಿಯಲ್ಲಿ ಕೈ ಹಾಕದಿರುವುದೇ ಉತ್ತಮ ಎಂದು ಹೇಳಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss