ಬಿಜೆಪಿ ಸೇರಿದ ಉತ್ತರಾಖಂಡ್ ಆಮ್ ಆದ್ಮಿಪಕ್ಷದ ಸಿಎಂ ಅಭ್ಯರ್ಥಿ ಅಜಯ್ ಕೊಥಿಯಾಲ್!

ಹೊಸದಿಗಂತ ಜಿಜಿಟಲ್‌ ಡೆಸ್ಕ್‌:

ಉತ್ತರಾಖಂಡ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (AAP) ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ, ನಿವೃತ್ತ ಕರ್ನಲ್ ಅಜಯ್ ಕೊಥಿಯಾಲ್ ಅವರು ಡೆಹ್ರಾಡೂನ್‌ನಲ್ಲಿ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದಾರೆ.
ಕಳೆದ ವಾರ ಆಮ್ ಆದ್ಮಿ ಪಕ್ಷ ತೊರೆದಿದ್ದ ಕೊಥಿಯಾಲ್ ,ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ .
ಎಎಪಿ ತೊರೆಯುವುದಾಗಿ ಟ್ವಿಟರ್ ನಲ್ಲಿ ಘೋಷಿಸಿದ ಕೊಥಿಯಾಲ್ ಅಲ್ಲೇ ರಾಜೀನಾಮೆ ಪತ್ರವನ್ನೂ ಟ್ವೀಟ್ ಮಾಡಿದ್ದರು. ನಾನು ಏಪ್ರಿಲ್ 19, 2021 ರಿಂದ ಮೇ 18, 2022 ರವರೆಗೆ ಆಮ್ ಆದ್ಮಿ ಪಕ್ಷದ ಸದಸ್ಯನಾಗಿದ್ದೇನೆ. ಮಾಜಿ ಸೈನಿಕರು, ಮಾಜಿ ಅರೆ ಮಿಲಿಟರಿ ಸಿಬ್ಬಂದಿ, ಹಿರಿಯರು, ಮಹಿಳೆಯರು, ಯುವಕರು ಮತ್ತು ಬುದ್ಧಿಜೀವಿಗಳ ಭಾವನೆಗಳನ್ನು ಇಟ್ಟುಕೊಂಡು ನಾನು ನಿಮಗೆ ಮೇ 18 ರಂದು ನನ್ನ ರಾಜೀನಾಮೆ ಕಳುಹಿಸುತ್ತಿದ್ದೇನೆ ಎಂದು ಕೊಥಿಯಾಲ್ ಟ್ವೀಟ್ ಮಾಡಿದ್ದರು.
ಈ ವರ್ಷದ ಮಾರ್ಚ್‌ನಲ್ಲಿ ಆಡಳಿತಾರೂಢ ಬಿಜೆಪಿ ಉತ್ತರಾಖಂಡದಲ್ಲಿ 47 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಮರಳಿತು. ಬಿಜೆಪಿ 70 ಸ್ಥಾನಗಳ ಅಸೆಂಬ್ಲಿಯಲ್ಲಿ ಅಗತ್ಯವಿರುವ ಬಹುಮತಕ್ಕಿಂತ 11 ಹೆಚ್ಚು ಸೀಟುಗಳನ್ನು ಗಳಿಸಿತ್ತು. ಎಎಪಿಗೆ ಯಾವುದೇ ಸೀಟು ಲಭಿಸಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!