ಜೋಶಿಮಠದಲ್ಲಿ ಹೆಚ್ಚಿದ ಅಪಘಾತಗಳ ತೀವ್ರತೆ: ನರಸಿಂಹ ದೇವಸ್ಥಾನದಲ್ಲಿ ಸಿಎಂ ಧಾಮಿ ಪೂಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜೋಶಿಮಠದಲ್ಲಿ ಅಪಾಯ ಉಲ್ಬಣಗೊಳ್ಳುತ್ತಿದೆ. ಭೂಕುಸಿತದ ಜತೆಗೆ ನೆಲದೊಳಗಿನ ಚಲನೆಯಿಂದ ಮನೆಗಳೂ ಬಿರುಕು ಬಿಡುತ್ತಿವೆ. ಈಗಾಗಲೇ 753 ಮನೆಗಳು ಬಿರುಕು ಬಿಟ್ಟಿವೆ. ರಾಜ್ಯ ಹಾಗೂ ಕೇಂದ್ರ ತಂಡಗಳು ಸ್ಥಳ ಪರಿಶೀಲನೆ ನಡೆಸಿ ಬಿರುಕು ಬಿಟ್ಟಿರುವ ಕಾರಣಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತವಾಗಿವೆ. ಇನ್ನೊಂದೆಡೆ ಬಿರುಕುಬಿಟ್ಟು ಬೀಳಲು ಸಿದ್ಧವಾಗಿರುವ ಮನೆಗಳನ್ನು ನೆಲಸಮಗೊಳಿಸಲು ಸರ್ಕಾರ ಮುಂದಾಗಿದೆ.

ಈ ನಡುವೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಗುರುವಾರ ಬೆಳಗ್ಗೆ ಜೋಶಿಮಠಕ್ಕೆ ಭೇಟಿ ನೀಡಿ ನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬುಧವಾರ ರಾತ್ರಿಯಿಂದ ಸಿಎಂ ಧಾಮಿ ಜೋಶಿಮಠದಲ್ಲಿ ತಂಗಿದ್ದಾರೆ. ಬುಧವಾರ ರಾತ್ರಿ ಅವರು ಪರಿಹಾರ ಶಿಬಿರಗಳಿಗೆ ತೆರಳಿ ಸಂತ್ರಸ್ತರನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಜನತೆಗೆ ಬೆಂಬಲವಾಗಿ ತಾವು ನಿಂತಿದ್ದು, ಪ್ರಧಾನಿ ಮೋದಿ ಅವರೇ ಸಂಪೂರ್ಣ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ ಎಂದರು. ಬಿರುಕು ಬಿಟ್ಟು ಬೀಳಲು ಸಿದ್ಧವಾಗಿರುವ ಮನೆಗಳನ್ನು ನೆಲಸಮಗೊಳಿಸಿ ಸಂತ್ರಸ್ತರಿಗೆ ಮಧ್ಯಂತರ ಸಹಾಯ ಧನವಾಗಿ 1.5 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಧಾಮಿ ತಿಳಿಸಿದರು.

ಮತ್ತೊಂದೆಡೆ ಜೋಶಿಮಠದಲ್ಲಿ ಅಪಾಯದ ತೀವ್ರತೆ ಹೆಚ್ಚಿದೆ. ಹವಾಮಾನ ವೈಪರೀತ್ಯದಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಮಳೆಯಿಂದಾಗಿ ಇನ್ನಷ್ಟು ಮನೆಗಳು ಬಿರುಕು ಬಿಡುವ ಸಾಧ್ಯತೆ ಇದೆ. ಅಧಿಕಾರಿಗಳು ಸ್ಥಳೀಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!