Friday, March 5, 2021

Latest Posts

ಉತ್ತರಾಖಂಡದಲ್ಲಿ ಹಿಮನದಿ ಸ್ಫೋಟ: ಕಣ್ಮರೆಯಾದವರನ್ನು ಮೃತರೆಂದು ಘೋಷಿಸಲು ಸರ್ಕಾರ ನಿರ್ಧಾರ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಉತ್ತರಾಖಂಡದಲ್ಲಿ ಸಂಭವಿಸಿದ ಹಿಮ ಕುಸಿತದಿಂದಾಗಿ ಧೌಲಿಗಂಗಾ ನದಿಯಲ್ಲಿ ಉಂಟಾದ ಪ್ರವಾಹದಲ್ಲಿ 136 ಜನ ಕಣ್ಮರೆಯಾಗಿದ್ದಾರೆ. ಆ 136 ಮಂದಿಯೂ ಮೃತಪಟ್ಟಿದ್ದಾರೆ ಘೋಷಿಸಲು  ಉತ್ತರಾಖಂಡ ಆರೋಗ್ಯ ಇಲಾಖೆ ನಿರ್ಧರಿಸಿದೆ.

ಚಮೋಲಿ ದುರಂತದಲ್ಲಿ ಕಾಣೆಯಾದ 204 ಜನರ ಪೈಕಿ, 69 ಮೃತದೇಹಗಳು ಪತ್ತೆಯಾಗಿದ್ದು, 135 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.

ರಾಜ್ಯ ಆರೋಗ್ಯ ಕಾರ್ಯದರ್ಶಿ ಅಮಿತ್ ನೇಗಿ ಅವರು ಹೊರಡಿಸಿದ ಅಧಿಸೂಚನೆಯ ಹಿನ್ನೆಲೆಯಲ್ಲಿ, 1969ರ ಜನನ ಮತ್ತು ಮರಣ ನೋಂದಣಿ ಕಾಯ್ದೆ, 1969ತಿದ್ದುಪಡಿ ಅಧಿನಿಯಮ ಇದರ ಅಡಿಯಲ್ಲಿ ನಿಯೋಜಿತ ಸರ್ಕಾರಿ ಅಧಿಕಾರಿಯು ಕಾಣೆಯಾದವರ ಮರಣ ಪ್ರಮಾಣ ಪತ್ರಗಳನ್ನು ಅವರ ಕುಟುಂಬ ಅಥವಾ ಸಂಬಂಧಿಕರಿಗೆ ನೀಡಲಾಗುವುದು.

ಅಧಿ ಸೂಚನೆಯಲ್ಲಿ ಈ ರೀತಿ ಹೇಳಲಾಗುತ್ತದೆ…

ಕಾಣೆಯಾದ ವ್ಯಕ್ತಿಯು, ಬದುಕಿರುವ ಸಾಧ್ಯತೆಗಳನ್ನು ಮೀರಿ ಮೃತಪಟ್ಟಿದ್ದರೆ, ಆತನ ಶವ ಇನ್ನೂ ಪತ್ತೆಯಾಗಿಲ್ಲದಿದ್ದರೆ, ಆ ಸಂದರ್ಭದಲ್ಲಿ ಅಧಿಕಾರಿಗಳು ಅಗತ್ಯ ತನಿಖೆಯ ನಂತರ ಆತನ ಕುಟುಂಬ ಸದಸ್ಯರಿಗೆ ಮರಣ ಪ್ರಮಾಣ ಪತ್ರ ನೀಡುವ ಮೂಲಕ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಬಹುದು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss