ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ವರದಿ, ಕಾಸರಗೋಡು:
ಕಾಸರಗೋಡು ಜಿಲ್ಲೆಯಲ್ಲಿ 40 ರಿಂದ 44 ವರ್ಷದ ನಡುವಿನ ವಯೋಮಾನದವರಿಗೆ ವ್ಯಾಕ್ಸಿನೇಶನ್ ಜೂ.8 ರಿಂದ ನಡೆಯಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಕೆ.ಆರ್.ರಾಜನ್ ತಿಳಿಸಿದ್ದಾರೆ.
1977 ರಿಂದ 1981ರ ನಡುವಿನ ಅವಧಿಯಲ್ಲಿ ಜನಿಸಿದವರನ್ನು ಈ ವಿಭಾಗದಲ್ಲಿ ಅಳವಡಿಸಿ ಕೋವಿಡ್ ಪ್ರತಿರೋಧ ಲಸಿಕೆ ನೀಡಲಾಗುವುದು. ಇದಕ್ಕಾಗಿ ಜಿಲ್ಲೆಯ 30 ಆರೋಗ್ಯ ಸಂಸ್ಥೆಗಳಲ್ಲಿ ವ್ಯಾಕ್ಸಿನೇಶನ್ ನೀಡಿಕೆ ಸೌಲಭ್ಯವನ್ನು ವ್ಯವಸ್ಥೆಗೊಳಿಸಲಾಗಿದೆ. ಜೊತೆಗೆ 45 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ಮಂದಿಗೆ ಲಸಿಕೆ ನೀಡುವ ಅಂಗವಾಗಿ ಜಿಲ್ಲೆಯ 16 ಆರೋಗ್ಯ ಸಂಸ್ಥೆಗಳಲ್ಲಿ ಸಿದ್ಧತೆ ನಡೆಸಲಾಗಿದೆ. ವ್ಯಾಕ್ಸಿನೇಶನ್ ಲಭ್ಯತೆಗೆ ಸಂಬಂಧಿತ ಪೋರ್ಟಲ್ ನಲ್ಲಿ ನೋಂದಾಯಿಸಿ ಸುಲಲಿತವಾದ ಕೇಂದ್ರಗಳಲ್ಲಿ ಅಲೋಟ್ ನಡೆಸಬೇಕಿದೆ. ಈ ಬಗ್ಗೆ ಹೆಚ್ಚುವರಿ ಮಾಹಿತಿಗಳಿಗೆ 9061078026 ಅಥವಾ 9061076590 ಎಂಬ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಬಹುದು.