Wednesday, August 17, 2022

Latest Posts

ಲಸಿಕೆ ತೆಗೆದುಕೊಳ್ಳುವುದು ನಿಮಗೂ, ನಿಮ್ಮ ಸುತ್ತ-ಮುತ್ತಲಿನವರಿಗೂ ಒಳ್ಳೆಯದು: ವೈರಲ್ ಆಗ್ತಿದೆ 97ರ ವೃದ್ಧೆಯ ಮನವಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಸೋಂಕನ್ನು ಮೆಟ್ಟಲು ಲಸಿಕೆ ಅತ್ಯಗತ್ಯ.ಇದನ್ನು ಅರಿತ ಬಹುತೇಕರು ಲಸಿಕೆಯನ್ನು ಪಡೆಯುತ್ತಿದ್ದಾರೆ. ಕೆಲವರಿಗೆ ಇನ್ನೂ ಲಸಿಕೆ ಬಗೆಗಿನ ಭಯ ಹೋಗಿಲ್ಲ. ಹೀಗಾಗಿ, ಲಸಿಕೆ ಪಡೆಯಲು ಹಿಂಜರಿಯುವವರೂ ಇದ್ದಾರೆ.

ಲಸಿಕೆ ಪಡೆಯುವಂತೆ ಈಗಾಗಲೇ ಸಾಕಷ್ಟು ಜಾಗೃತಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.  ಇದೀಗ ಇದಕ್ಕೆ ಇನ್ನೊಂದು ವಿಡಿಯೋ ಸೇರ್ಪಡೆಯಾಗಿದ್ದು, 97 ವರ್ಷದ ವೃದ್ಧೆ ಲಸಿಕೆ ಪಡೆಯುವ ಮಹತ್ವದ ಬಗ್ಗೆ ಮಾತನಾಡುತ್ತಿದ್ದಾರೆ.

ಈ ವಿಡಿಯೋವನ್ನು ಪತ್ರಕರ್ತೆ ಲತಾ ವೆಂಕಟೇಶ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ?

ನನಗೆ 97 ವರ್ಷ. ನಾನು ಕೊರೋನಾ ಲಸಿಕೆಯ ಮೊದಲ ಡೋಸ್ ಮಾರ್ಚ್ 9ರಂದು ತೆಗೆದುಕೊಂಡಿದ್ದೆ. ನನಗೆ ಯಾವುದೇ ನೋವು ಅಥವಾ ಅಡ್ಡಪರಿಣಾಮ ಆಗಲಿಲ್ಲ. ಭಯಪಡಬೇಡಿ ಕೊರೋನಾ ಲಸಿಕೆ ತೆಗೆದುಕೊಳ್ಳಿ. ಲಸಿಕೆ ತೆಗೆದುಕೊಳ್ಳುವುದು ನಿಮಗೂ, ನಿಮ್ಮ ಸುತ್ತಮುತ್ತಲಿನವರಿಗೂ ಒಳ್ಳೆಯದು ಎಂದು ಹೇಳಿದ್ದಾರೆ.

ಲತಾ ಅವರು  ಈ ವಿಡಿಯೋವನ್ನು ಹಂಚಿಕೊಂಡು ಮೂರು ದಿನ ಕಳೆದಿದ್ದರೂ ಕೂಡ ವಿಡಿಯೋ ಇಂದಿಗೂ ಸಾಕಷ್ಟು ವೈರಲ್ ಆಗುತ್ತಿದೆ.  ಅಜ್ಜಿಯ ಜೀವನೋತ್ಸಾಹ, ಧೈರ್ಯ ತುಂಬುವ ಪರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!