Monday, August 15, 2022

Latest Posts

ಮುಂದಿನ ಎರಡು ತಿಂಗಳಲ್ಲಿ ಬೇಕಾದಷ್ಟು ಲಸಿಕೆಗಳು ಲಭ್ಯ: AIIMS ನಿರ್ದೇಶಕ ಡಾ. ರಂದೀಪ್ ಗುಲೇರಿಯಾ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮುಂದಿನ ದಿನಗಳಲ್ಲಿ ವ್ಯಾಕ್ಸಿನ್ ಕೊರತೆ ಆಗಲ್ಲ. ಮುಂದಿನ ಎರಡು ತಿಂಗಳಲ್ಲಿ ಬೇಕಾದಷ್ಟು ಲಸಿಕೆಗಳು ಲಭ್ಯ ಇರಲಿದೆ ಅಂತಾ ದೆಹಲಿಯ AIIMS ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಡಾ.ರಂದೀಪ್ ಗುಲೇರಿಯಾ, ಭಾರತಕ್ಕೆ ಶೀಘ್ರದಲ್ಲೇ ಹೊರಗಿನಿಂದ ವ್ಯಾಕ್ಸಿನ್ ಬರಲಿದ್ದು, ಈ ಮೂಲಕ ಲಸಿಕೆ ತಯಾರಿಸುವ ಕಂಪನಿಗಳು ಹೆಚ್ಚುವರಿಯಾಗಿ ಉತ್ಪಾದನಾ ಘಟಕ ತೆರೆಯಲು ಆರಂಭಿಸಿರೋದ್ರಿಂದ ಹೆಚ್ಚು ವ್ಯಾಕ್ಸಿನ್​ಗಳು ಲಭ್ಯವಾಗಲಿದೆ.
ಜೊತೆಗೆ ಆದಷ್ಟು ಬೇಗ ವಯಷ್ಕರಿಗೆ ಮತ್ತು ಇತರೆ ಸಮಸ್ಯೆಗಳನ್ನ ಹೊಂದಿರೋರಿಗೆ ವ್ಯಾಕ್ಸಿನ್ ನೀಡಬೇಕಿದೆ ಎಂದು ಎಚ್ಚರಿಸಿದ್ದಾರೆ.ಯಾಕೆಂದರೆ ಆರೋಗ್ಯದಲ್ಲಿ ಇತರೆ ಸಮಸ್ಯೆಗಳು ಇರೋರಿಗೆ ಕೊರೋನಾ ಬಂದರೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ನಾನು ನಂಬಿದ್ದೇನೆ. ಹೀಗಾಗಿ ಅಂತವರಿಗೆ ವ್ಯಾಕ್ಸಿನ್ ನೀಡಲು ನಾವು ಒತ್ತು ನೀಡಬೇಕಿದೆ. ಅಲ್ಲದೇ ದೇಶದಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆಯ ವೇಗವನ್ನ ಹೆಚ್ಚಿಸಬೇಕಿದೆ ಅಂತಾ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss