ವಾಲ್ಮೀಕಿ ಹಗರಣ | 21 ಕೋಟಿ ಮುಟ್ಟಿಲ್ಲ ಅಂದ್ರೆ ಆಣೆ ಮಾಡಲಿ – ಅನಿಲ್ ಲಾಡ್ ಸವಾಲು

ಹೊಸದಿಗಂತ ವರದಿ ಬಳ್ಳಾರಿ:

ನಾನು ಅಪರಂಜಿ ಚಿನ್ನ, ಅಕ್ರಮ ಎನ್ನುವುದು ಜಾಯಮಾನದಲ್ಲಿಲ್ಲ ಎನ್ನುವ, ಮಾಜಿ ಸಚಿವ ಬಿ.ನಾಗೇಂದ್ರ, ನಗರ ಶಾಸಕ ನಾರಾ ಭರತ್ ರೆಡ್ಡಿ, ಎಂ.ಪಿ.ಈ.ತುಕಾರಾಂ, ರಾಜ್ಯಸಭಾ ಸದಸ್ಯ ಡಾ. ನಾಸೀರ್ ಹುಸೇನ್ ಅವರು, ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ಮುಟ್ಟಿಲ್ಲ ಅಂದ್ರೆ, ಸಂಡೂರು ಶ್ರೀ ಕುಮಾರಸ್ವಾಮಿ ಅಥವಾ ಬಳ್ಳಾರಿ ಶ್ರೀ ಕನಕ ದುರ್ಗಮ್ಮ ದೇಗುಲದಲ್ಲಿ ಆಣೆ ಮಾಡಲಿ, ಹಣ ದುರ್ಬಳಕೆ ಮಾಡಿದ್ದಾರೆ ಎಂದು ನಾವು ಮಾಡ್ತೇವೆ ಎಂದು ಮಾಜಿ ಶಾಸಕ ಅನಿಲ್ ಲಾಡ್ ಅವರು ಸವಾಲು ಹಾಕಿದರು.

ನಗರದ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದುಳಿದವರು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಲಿ ಎಂದು ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಿದೆ, ಎಸ್ಟಿ ಮೀಸಲು ಕ್ಷೇತ್ರದಿಂದ ಗೆಲುವು ಸಾಧಿಸಿ, ಎಸ್ಟಿ ಅಭಿವೃದ್ದಿ ನಿಗಮದ ಹಣವನ್ನೇ ಮಾಜಿ ಸಚಿವ ಬಿ.ನಾಗೇಂದ್ರ ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ ಅಂದ್ರೆ ಏನರ್ಥ, ಇದನ್ನು ನಾವಲ್ಲ ಇಡಿ ಅಧಿಕಾರಿಗಳೇ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ. 21 ಕೋಟಿ ರೂ.ಗೂ ಹೆಚ್ಚು ಹಣ ದುರ್ಬಳಕೆಯಾಗಿದೆ, ಅದು ನಾಗೇಂದ್ರ ಅವರ ಸೂಚನೆ ಮೇರೆಗೆ ದೊಡ್ಡ ಮಟ್ಟದ ಹಗರಣ ಇದಾಗಿದೆ ಎಂದಿದ್ದಾರೆ.

ಸಿ.ಎಂ.ಸಿದ್ದರಾಮಯ್ಯ ಅವರು, ಹಣಕಾಸು ಇಲಾಖೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದು, ಅವರ ಗಮನಕ್ಕಿಲ್ಲದೆ ಈ ಬಹುಕೋಟಿ ಹಗರಣ ನಡೆಯಲು ಸಾದ್ಯವೇ ಇಲ್ಲ, ಕಳೆದ ಲೋಕಸಭೆ ಚುನಾವಣೆಯಲ್ಲಿ ಕೈ ನಾಯಕರು ವಾಲ್ಮೀಕಿ ಅಭಿವೃದ್ದಿ ನಿಗಮದ 21 ಕೋಟಿ ಗೂ ಹೆಚ್ಚು ಹಣವನ್ನು ಬಳಸಿ, ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಗೆಲುವು ಸಾಧಿಸಲಿದ್ದಾರೆ ಎಂದು ಬಹುತೇಕ ಸರ್ವೆಗಳು ಹೇಳಿದ್ದವು. ಕಾಂಗ್ರೆಸ್ ನವರ ಹಣದ ಪ್ರಭಾವ, ನಾನಾ ರೀತಿಯ ಆಮಿಷದಿಂದ ನಮ್ಮ ಅಭ್ಯರ್ಥಿ ಸೋಲು ಅನುಭವಿಸಬೇಕಾಯಿತು ಎಂದರು.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!