Saturday, July 2, 2022

Latest Posts

ಸಾಮಾಜಿಕ ಮೌಲ್ಯಗಳುಳ್ಳ ವಾಲ್ಮೀಕಿಯವರ ಆದರ್ಶ ಮೈಗೂಡಿಸಿಕೊಳ್ಳಬೇಕು: ಸಚಿವ ನಾರಾಯಣಗೌಡ ಕರೆ

ಹೊಸದಿಗಂತ ವರದಿ, ಮಂಡ್ಯ:

ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೆಮ, ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಹಲವಾರು ಮಾನವಿಯ ಮತ್ತು ಸಾಮಾಜಿಕ ಮೌಲ್ಯಗಳುಳ್ಳ ಅನನ್ಯವಾದ ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರ ಆದರ್ಶಗಳನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿ ವ ಕೆ.ಸಿ. ನಾರಾಯಣಗೌಡ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ನಗರದ ಜಿ.ಪಂ. ಕಾವೇರಿ ಸಭಾಂಗಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿಯವರ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ರಾಷ್ಟ್ರದಲ್ಲೇ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಗುತ್ತಿದೆ, ಮಹರ್ಷಿಯವರು ರಾಮಾಯಣ ಬರೆಯುವ ಮೂಲಕ ಎಲ್ಲ ಜನರಿಗೆ ಶಕ್ತಿ ಕೊಟ್ಟಿದ್ದಾರೆ ಎಂದರು.
ಯಾವ ವ್ಯಕ್ತಿ ಶ್ರಮಜೀವಿಯಾಗಿ ಹೊರಹೊಮ್ಮಿದ್ರೆ ಅವರಿಗೆ ಜೀವನದ ಬಗ್ಗೆ ಗೊತ್ತಿರುತ್ತದೆ ಅದೇ ರೀತಿ ನಾಯಕ ಸಮುದಾಯದವರು ಮಹಾರಾಷ್ಟ್ರದಲ್ಲಿ ಇತರ ಸಮುದಾಯಕ್ಕೆ ಸಹಾಯ ಮಾಡುತ್ತಿದ್ದಾರೆ ಆದ್ದರಿಂದ ನಾಯಕ ಸಮುದಾಯವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಒಂದು ಉತ್ತಮ ಸ್ಥಾನಕ್ಕೆ ಈ ಸಮುದಾಯ ತರಲು ನಾನು ಪ್ರಯತ್ನಿಸುತ್ತೇನೆ, ನಿಮ್ಮ ಜೊತೆ ನಾವು ಸದಾ ಇರುತ್ತೇವೆ ಎಂದು ಸಚಿವರು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss