ವಂದೇ ಭಾರತ್ ರೈಲನ್ನು ಗೇಲಿ ಮಾಡಿದವರು ಗಮನಿಸಬೇಕಾದ ಚಿತ್ರ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಎಮ್ಮೆಗಳು ಅಡ್ಡಬಂದಿದ್ದರಿಂದ ಮೂತಿ ಜಜ್ಜಿಸಿಕೊಂಡಿದ್ದ ವಂದೇ ಭಾರತ್ ರೈಲಿನ ಮುಂಭಾಗದ ಚಿತ್ರ ಹಾಕಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ತಾಣಗಳೂ ಸೇರಿದಂತೆ ಹಲವರು ಕುಹಕವಾಡಿದ್ದರು. ಅದು ಒಂದೇ ದಿನದಲ್ಲಿ ಸರಿಯಾಗಿ ಮತ್ತೆ ಕಾರ್ಯಾರಂಭ ಮಾಡಿದ್ದೂ ಆಗಿದೆ.

ಆದರೆ, ಟೀಕೆ ಮಾಡಿದವರ ವಾದವೇನೆಂದರೆ- “ಅಷ್ಟೆಲ್ಲ ಪ್ರಚಾರ ಮಾಡಿ ಲಾಂಚ್ ಮಾಡಿದ್ದ ವಂದೇ ಭಾರತ್ ಮೇಲ್ದರ್ಜೆಗೇರಿದ ರೈಲಿನ ಮೂತಿ ಒಂದು ಹೊಡೆತಕ್ಕೆ ಕಿತ್ತುಹೋಗುವಷ್ಟು ಕಳಪೆಯಾ ಎಂಬುದು.” ಹೀಗೆ ಪ್ರಶ್ನಿಸುವವರಿಗೆ ಭೌತನಿಯಮಗಳು ಗೊತ್ತಿಲ್ಲವಷ್ಟೆ. ವಿಮಾನದ ಮೂತಿಗೆ ಹಕ್ಕಿ ಬಡಿದಾಗಲೂ ಅಪಾಯಕಾರಿ ವಿಧ್ವಂಸಗಳಾಗುತ್ತವೆ. ಅರೆ ಹಕ್ಕಿ ಅಷ್ಟು ಚಿಕ್ಕದು, ಅದು ಹೇಗೆ ವಿಮಾನದ ಮೂತಿಯೇ ಕಿತ್ತು ಬರುವಂತೆ ಮಾಡೀತು ಎನ್ನುವಂತಿಲ್ಲ… ಏಕೆಂದರೆ ಈ ಲೆಕ್ಕಾಚಾರ ವೇಗಕ್ಕೆ ಮತ್ತು ಅದು ಉಂಟುಮಾಡುವ ಪರಿಣಾಮಕ್ಕೆ ಸಂಬಂಧಿಸಿದ್ದು. ಇದರರ್ಥ ರೈಲಿನ ಮೂತಿಯಲ್ಲೋ, ವಿಮಾನದ ಮೂತಿಯಲ್ಲೋ ಬಳಸಿರುವ ವಸ್ತು ಕಳಪೆ ಅಂತಲ್ಲ. 

ಈ ಮೇಲಿನ ಚಿತ್ರ ಜಪಾನಿನ ಬುಲೆಟ್ ಟ್ರೇನ್ ಮೂತಿ ಜಜ್ಜಿಸಿಕೊಂಡಿರುವಂಥದ್ದು. 2018ರಲ್ಲಿ ನಡೆದ ಘಟನೆ. ಅದು ಹೇಗೋ ಹೈಸ್ಪೀಡ್ ರೈಲಿನ ಟ್ರಾಕಿನೊಳಗೆ ನುಗ್ಗಿ ಅದಕ್ಕೆ ಎದುರಾಗಿ ನಿಂತ ವ್ಯಕ್ತಿ ಪ್ರಾಣತೆತ್ತ. ಆದರೆ, ಬುಲೆಟ್ ಟ್ರೇನ್ ಮೂತಿಯೂ ಕಿತ್ತು ಬಂತು. ಅಷ್ಟು ಸ್ಪೀಡಿನ ಬುಲೆಟ್ ರೈಲಿಗೆ ಯಕಃಶ್ಚಿತ ಒಬ್ಬ ವ್ಯಕ್ತಿಯ ಢಿಕ್ಕಿ ತಾಳಿಕೊಳ್ಳಲಾಗಲಿಲ್ಲವಾ ಅಂತ ಅಲ್ಯಾರೂ ಪ್ರಶ್ನಿಸಿ ನಗಲಿಲ್ಲ. 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!