Tuesday, February 27, 2024

ಗುಜರಾತ್ ಗೃಹ ಸಚಿವರು ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗುಜರಾತ್ ಗೃಹ ಸಚಿವ ಹರ್ಷ್ ಸಾಂಘ್ವಿ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ.

ಅಹಮದಾಬಾದ್​ನಿಂದ ರಾಜ್​ಕೋಟ್​ ನಡುವೆ ವಂದೇ ಭಾರತ್ ರೈಲು ಸಂಚರಿಸುತ್ತಿದ್ದು, ಈ ವೇಳೆ ದುಷ್ಕರ್ಮಿಗಳ ಕಲ್ಲು ತೂರಾಟ ನಡೆಸಿದ್ದಾರೆ. ಆದ್ರೆ ಯಾರಿಗೂ ಗಾಯವಾಗಿಲ್ಲ. ಆದರೆ ರೈಲಿನ ಕಿಟಕಿಯ ಗಾಜು ಒಡೆದಿದೆ.

ರಾಜಕೋಟ್​ನ ಬಿಲೇಶ್ವರ್ ಸ್ಟೇಶನ್ ಬಳಿ ಘಟನೆ ನಡೆದಿದ್ದು, ಈ ಕುರಿತು ರೈಲ್ವೆ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ರಾಜ್​ಕೋಟ್ ರೈಲ್ವೆ ವಿಭಾಗದ ಭದ್ರತಾ ಅಧಿಕಾರಿ ಪವನ್ ಕುಮಾರ್ ಶ್ರೀವಾಸ್ತವ, ವಂದೇ ಭಾರತ್ ರೈಲು ಪ್ರಸ್ತುತ ರಾಜ್​ಕೋಟ್ ವಿಭಾಗದಲ್ಲಿ ಚಲಿಸುತ್ತಿದೆ. ರೈಲು ಕಳೆದ ರಾತ್ರಿ 10 ಗಂಟೆ ಸುಮಾರಿಗೆ ಬಿಲೇಶ್ವರದಿಂದ ರಾಜ್​ಕೋಟ್​ಗೆ ಬರುವಾಗ ರಾಜ್​ಕೋಟ್​ನಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದ್ದು. ಅಪರಿಚಿತ ವ್ಯಕ್ತಿ ರೈಲಿನ ಮೇಲೆ ಕಲ್ಲು ತೂರಿದ್ದಾನೆ.ಆದರೆ ಈ ಕಲ್ಲು ತೂರಾಟದಿಂದ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ. ರೈಲಿನ ಸಿ 4- ಸಿ 5 ಬೋಗಿಯ ಕಿಟಕಿಯಲ್ಲಿ ಸಣ್ಣ ಬಿರುಕು ಕಂಡುಬಂದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಈ ಘಟನೆಯ ನಂತರ, ನಾವು ತಕ್ಷಣ ತಂಡವನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ಈವರೆಗೆ ಆರೋಪಿಯ ಬಗ್ಗೆ ಯಾವುದೇ ಪ್ರಮುಖ ಸುಳಿವು ಸಿಕ್ಕಿಲ್ಲ, ಆದರೆ ಪೊಲೀಸರು ತೀವ್ರವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಪ್ರಾಥಮಿಕ ಅಂದಾಜಿನ ಪ್ರಕಾರ ರಾಜ್​ಕೋಟ್ ಮತ್ತು ಬಿಲೇಶ್ವರ್ ನಡುವೆ ಅನೇಕ ಗುಡಿಸಲುಗಳಿವೆ. ಅಲ್ಲಿ ಆಟವಾಡುತ್ತಿರುವ ಚಿಕ್ಕ ಮಕ್ಕಳು ಕೆಲವೊಮ್ಮೆ ರೈಲು ಬಂದಾಗ ಕಲ್ಲೆಸೆಯುತ್ತಾರೆ. ಕಲ್ಲು ತೂರಾಟ ಮಾಡದಂತೆ ಈ ಪ್ರದೇಶದಲ್ಲಿ ಪ್ರತಿವರ್ಷ ಜಾಗೃತಿ ಅಭಿಯಾನ ನಡೆಸಲಾಗುತ್ತದೆ. ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಮತ್ತು ನಮ್ಮ ತಂಡವು ಈ ವಿಷಯದಲ್ಲಿ ಸಮಗ್ರ ತನಿಖೆ ಪ್ರಾರಂಭಿಸಿದೆ.ಎಂದು ಅಧಿಕಾರಿ ಪವನ್ ಕುಮಾರ್ ಶ್ರೀವಾಸ್ತವ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!