ವಂದೇ ಭಾರತ್‌ನ ವಿನ್ಯಾಸ ವಿಮಾನಕ್ಕಿಂತಲೂ ಉತ್ತಮ: ಮೆಚ್ಚುಗೆ ವ್ಯಕ್ತಪಡಿಸಿದ ಅಶ್ವಿನಿ ವೈಷ್ಣವ್ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ದೇಶದಲ್ಲಿ ಇಂದು ವಂದೇ ಭಾರತ್ ರೈಲುಗಳ (Vande Bharat Express Train) ಸಂಖ್ಯೆ ಅಧಿಕವಾಗುತ್ತಿದ್ದು, ಇತರೇ ರೈಲು ಗಳ ಜೊತೆ ಹೋಲಿಸಿದರೆ ವಿಭಿನ್ನವಾಗಿ ರಚನೆಯಾಗಿದೆ.

ಇಲ್ಲಿ ಪ್ರಯಾಣಿಕರಿಗೆ ಅತ್ಯಂತ ಆರಾಮದಾಯಕ ಪ್ರಯಾಣದ ಅನುಭವವನ್ನು ನಿಡಬಲ್ಲದು ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ.

ಸಿಕಂದರಾಬಾದ್ ಹಾಗೂ ವಿಶಾಖಪಟ್ಟಣಂ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಚಾಲನೆ ನೀಡುರುವ ಹಿನ್ನೆಲೆ ಮಾತನಾಡಿರುವ ಅಶ್ವಿನಿ ವೈಷ್ಣವ್, ವಂದೇ ಭಾರತ್ ರೈಲುಗಳು ವಿಮಾನಗಳಿಗಿಂತಲೂ ಉತ್ತಮವಾದ ರಚನೆಯನ್ನು ಹೊಂದಿದೆ. ಭಾರತೀಯ ರೈಲ್ವೇ ಇದೀಗ ಅಂತಹ 8 ರೈಲುಗಳಿಗೆ ಚಾಲನೆ ನೀಡಿದೆ ಎಂದು ಹೇಳಿದರು.

ಮಕರ ಸಂಕ್ರಾಂತಿಯ ಪುಣ್ಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ತೆಲಂಗಾಣ ಮತ್ತು ಆಂಧ್ರಪ್ರದೇಶದ ಎಲ್ಲಾ ಜನರಿಗೆ ವಂದೇ ಭಾರತ್ ರೈಲಿನ ಉಡುಗೊರೆ ನೀಡಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ವೈಷ್ಣವ್ ಹೇಳಿದ್ದಾರೆ.

ವಂದೇ ಭಾರತ್ ಅತ್ಯುತ್ತಮ ರೈಲಾಗಿದೆ. ಇದು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 0 ಯಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳಬಲ್ಲದು. ಆದರೆ ವಿಶ್ವದ ಇತರ ರೈಲುಗಳು ಈ ವೇಗವನ್ನು ಪಡೆಯಲು 54 ರಿಂದ 60 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ವಂದೇ ಭಾರತ್‌ನ ವಿನ್ಯಾಸ ವಿಮಾನಕ್ಕಿಂತಲೂ ಉತ್ತಮವಾಗಿವೆ. ಇದು ಅತ್ಯಂತ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!