ದೇಶದ ಪ್ರಧಾನ ಸೇವಕ ಮೋದಿಯ ಊಟಕ್ಕೆ ಏನೇನು ಸ್ಪೆಷಲ್ ಇತ್ತು ಮೈಸೂರಲ್ಲಿ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಂತಾರಾಷ್ಟ್ರೀಯ ಯೋಗ ದಿನಾಚರಣೆಗಾಗಿ ಖುದ್ದು ಪ್ರಧಾನಿಯವರೇ ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿದ್ದಾರೆ. ಶುದ್ಧ ಸಸ್ಯಾಹಾರಿಯಾಗಿರುವ ಅವರಿಗೆ ಊಟಕ್ಕೆ ಏನು ಸ್ಪೆಷಲ್ ಮಾಡುತ್ತಿದ್ದಾರೆ ಮೈಸೂರಿಗರು ಅಂತ ಕುತೂಹಲವೇ?
ಇಲ್ಲಿದೆ ನೋಡಿ ದೇಶದ ಪ್ರಧಾನ ಸೇವಕನ ಊಟದ ಮೆನು…
ಮೈಸೂರಿನ ಹೋಟೆಲ್‌ನಲ್ಲಿ ತಂಗಿರುವ ಪ್ರಧಾನಿ ಮೋದಿ ಅವರಿಗೆ ಬೆಳಗ್ಗಿನ ಉಪಾಹಾರದಲ್ಲಿ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ ಸಾಂಬರ್ ಸಿದ್ದಪಡಿಸಲಾಗಿದೆ.
ಜೊತೆಗೆ ಬ್ರೆಡ್ ಬಟರ್, ಮಿಕ್ಸ್ ಫ್ರೂಟ್, ಚಹಾ ಹಾಗೂ ಮಾರಿ ಬಿಸ್ಕಟ್ ಇದೆ. ರಾತ್ರಿಯ ಊಟಕ್ಕೆ ಕಿಚಡಿ, ಗುಜರಾತಿ ಕರಿ, ರೋಟಿ, ದಾಲ್, ರೈಸ್, ಎರಡು ರೀತಿಯ ಸಬ್ಜಿ, ಮೊಸರು, ಮಿಕ್ಸ್ ಫ್ರೂಟ್ ಒಳಗೊಂಡ ಮೆನು ತಯಾರಿಸಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!