Wednesday, August 17, 2022

Latest Posts

ರಾಜ್ಯದ ವಿವಿಧ ಸಚಿವರ ಸಿಡಿ ಪ್ರಕರಣ ಬ್ಲಾಕ್‌ಮೇಲ್ ರಾಜಕಾರಣ: ಸಚಿವ ಶ್ರೀರಾಮಲು

ಹೊಸ ದಿಗಂತ ವರದಿ, ಧಾರವಾಡ:

ಕಾಂಗ್ರೆಸ್ ತೊರೆದು, ಬಿಜೆಪಿ ಚಿಹ್ನೆಯಿಂದ ಗೆದ್ದವರ ತೇಜೋವಧೆಗೆ ವ್ಯವಸ್ಥಿತ ಹುನ್ನಾರ್ ನಡೆದಿದೆ. ಇದೊಂದು ಬ್ಲಾಕ್‌ಮೇಲ್
ರಾಜಕಾರಣ. ಸಿಡಿ ಪ್ರಕರಣ ಕುರಿತಂತೆ ಸಚಿವರು ಕೋರ್ಟ್ ಮೊರೆ ಹೋಗಿದ್ದು ತಪ್ಪಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮಲು ಸಮರ್ಥಿಸಿಕೊಂಡರು.
ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಭವಿಷ್ಯ ಅನುಮಾನ ಬಂದ ನಂತರವೇ ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಸಚಿವರು ಕೇವಲ ಸಿಡಿ ವಿಚಾರಕ್ಕೆ ಅಷ್ಟಲ್ಲದೇ, ಬೇರೆ-ಬೇರೆ ವಿಷಯಗಳಿಗೆ ಕೋರ್ಟ್ ಮೊರೆ ಹೋಗಿರುವ ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಬಿಟ್ಟ ನಂತರವೇ, ಬಿಜೆಪಿ ಅಧಿಕಾರಕ್ಕೆ ಬಂದಿದೆ. ಬೇರೆ ಪಕ್ಷದಿಂದ ಬಂದು ಬಿಜೆಪಿ ಚಿಹ್ನೆ ಮೇಲೆ ಗೆದ್ದು ಸಚಿವರಾದವರ ತೇಜೋವಧೆ ವೇಳೆಯಲ್ಲಿ ತಾಳ್ಮೆಯಿಂದ ಇರುವುದಕ್ಕೆ ಕೋರ್ಟ್ ಮೊರೆ ಹೋಗಿದ್ದಾರೆ. ರಾಜಕಾರಣಿಗಳ ತೇಜೋವಧೆ ಮಾಡುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದರು.
ಮತ್ತಷ್ಟು ಸಚಿವರ ನ್ಯಾಯಾಲಯದ ಮೊರೆ ಹೋಗುವ ಬಗ್ಗೆ ಭವಿಷ್ಯ ನುಡಿಯಲು ನಾನೇನು ಜೋತಿಷ್ಯ ಅಲ್ಲ. ಸದ್ಯ ಹೊರಬಂದ ಸಿಡಿ ಬಗ್ಗೆಯೂ ಉಲ್ಲೇಖಿಸಲ. ಪ್ರಕರಣದ ತನಿಖೆ ವೇಳೆ ಮಾತನಾಡುವುದು ಸಮಂಜಸವೂ ಅಲ್ಲ. ತನಿಖೆ ನಂತರ ಸತ್ಯಾಸತ್ಯೆ ಹೊರಬರಲಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!