ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಗಾ ಹೀರೋ ವರುಣ್ ತೇಜ್ ಹಾಗೂ ನಾಯಕಿ ಲಾವಣ್ಯ ತ್ರಿಪಾಠಿ ಆರು ವರ್ಷಗಳಿಂದ ಗುಟ್ಟಾಗಿ ಪ್ರೀತಿಸುತ್ತಿದ್ದು, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೆಗಾ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ.
ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಇಟಲಿಯ ಟಸ್ಕನಿಯಲ್ಲಿ ವಿವಾಹವಾಗಲಿದ್ದಾರೆ. ಮೆಗಾ ಫ್ಯಾಮಿಲಿ ಈಗಾಗಲೇ ಇಟಲಿ ತಲುಪಿದೆ. ಕೇವಲ ಎರಡು ಕುಟುಂಬಗಳ ಸಮ್ಮುಖದಲ್ಲಿ ಇವರ ಮದುವೆ ನಡೆಯಲಿದೆ. ನಾಲ್ಕು ದಿನಗಳ ಕಾಲ ಈ ಮದುವೆ ಸಮಾರಂಭ ನಡೆಯಲಿದ್ದು, ಶೆಡ್ಯೂಲ್ ಹೀಗಿದೆ..
ಅಕ್ಟೋಬರ್ 30ರ ರಾತ್ರಿ ಸಂಗೀತ್ ಪಾರ್ಟಿ.
ಅಕ್ಟೋಬರ್ 31ರಂದು ಬೆಳಗ್ಗೆ ಅರಿಶಿನ ಶಾಸ್ತ್ರದ ಸಮಾರಂಭ ಹಾಗೂ ಸಂಜೆ ಮೆಹಂದಿ ಕಾರ್ಯಕ್ರಮ.
ನವೆಂಬರ್ 1 ರಂದು ವಿವಾಹ ಸಮಾರಂಭ.
ಇಟಲಿಯಿಂದ ಹೈದರಾಬಾದ್‌ಗೆ ಹಿಂತಿರುಗಿದ ನಂತರ ನವೆಂಬರ್ 5 ರಂದು ಇಲ್ಲಿ ಆರತಕ್ಷತೆ ನಡೆಯಲಿದೆ
ಈ ಆರತಕ್ಷತೆಗೆ ಚಿತ್ರರಂಗದ ಗಣ್ಯರು, ರಾಜಕೀಯ ಗಣ್ಯರು, ಮೆಗಾ ಅಭಿಮಾನಿಗಳು ಆಗಮಿಸಲಿದ್ದಾರೆ. ಈಗಾಗಲೇ ವರುಣ್ ಮತ್ತು ಲಾವಣ್ಯ ಇಟಲಿ ತಲುಪಿದ್ದಾರೆ. ಅಲ್ಲಿರುವ ಸ್ಪೆಷಲ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ.