ಮೇಲುಕೋಟೆ ವೈರಮುಡಿ ಉತ್ಸವಕ್ಕೂ ವರುಣನ ಆಗಮನ: ಭಕ್ತರಲ್ಲಿ ಮನೆಮಾಡಿದ ಸಂಭ್ರಮ

ಹೊಸದಿಗಂತ ವರದಿ, ಮಂಡ್ಯ : ಮೇಲುಕೋಟೆಯಲ್ಲಿ ನಡೆದ ಶ್ರೀದೇವಿ, ಭೂದೇವಿ ಸಮೇತ ಗರುಡಾರೂಢನಾದ ಶ್ರೀ ಚೆಲುವರಾಯಸ್ವಾಮಿಯನ್ನು ಕಣ್ತುಂಬಿಕೊಳ್ಳಲು ಸ್ವತಃ ವರುಣದೇವನೆ ಬಂದಿದ್ದಾನೆ. ಮೇಲುಕೋಟೆಯಾದ್ಯಂತ ವರುಣ ಸಿಂಚನವಾಗಿದೆ. ಚೆಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವದಲ್ಲಿ ಕೆಲವೊಮ್ಮೆ ವರುಣ ಸಿಂಚನವಾಗುವುದು ಸಾಮಾನ್ಯ. ಅದರಂತೆ ಈ ಬಾರಿಯೂ ವರುಣ ಸಿಂಚನವಾಗಿದೆ. ನೆರೆದಿದ್ದ ಭಕ್ತಾದಿಗಳು ಮಳೆಯಿಂದಾಗು ಪುಳಕಗೊಂಡರು. ಮೇಲುಕೋಟೆಯ ವೈರಮುಡಿ ಬ್ರಹ್ಮೋತ್ಸವದಲ್ಲಿ ಗಣ್ಯಾತಿ ಗಣ್ಯರೂ ಸಹ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಎಚ್.ಡಿ. ರೇವಣ್ಣ, … Continue reading ಮೇಲುಕೋಟೆ ವೈರಮುಡಿ ಉತ್ಸವಕ್ಕೂ ವರುಣನ ಆಗಮನ: ಭಕ್ತರಲ್ಲಿ ಮನೆಮಾಡಿದ ಸಂಭ್ರಮ