ಹೊಸದಿಗಂತ ವರದಿ ತುಮಕೂರು:
ಜಿಲ್ಲೆಯ ವೀಚಿ ಸಾಹಿತ್ಯ ಪ್ರತಿಷ್ಠಾನದ 2020 ನೇ ಸಾಲಿನ ವೀಚಿ ಸಾಹಿತ್ಯ ಪ್ರಶಸ್ತಿಯನ್ನು ಇಬ್ಬರು ಬರಹಗಾರರು ಹಂಚಿಕೊಂಡಿದ್ದಾರೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಹೆಚ್. ನಾಗರಾಜು ತಿಳಿಸಿದ್ದಾರೆ.
ಲೇಖಕ ಚ.ಹ.ರಘುನಾಥ್ ಅವರ ಸಿನಿಮಾ ಪ್ರಬಂಧಗಳ ಸಂಕಲನ ಬೆಳ್ಳಿತೊರೆ ಮತ್ತು ಲೇಖಕ ಈರಪ್ಪ ಎಂ.ಕಂಬಳಿ ಅವರ ಶೌಚಾಲಯ ತಪಸ್ವಿ ಮತ್ತು ಇತರ ಪ್ರಬಂಧಗಳು ಕೃತಿಗಳು ಆಯ್ಕೆಯಾಗಿವೆ.ಪ್ರಶಸ್ತಿಯ ಮೊತ್ತ 25 ಸಾವಿರ ರೂಗಳನ್ನು ಇಬ್ಬರಿಗೂ ಸಮಾನವಾಗಿ ಹಂಚಲಾಗುವುದು ಎಂದು ಅವರು ತಿಳಿಸಿದರು.
ಉದಯೋನ್ಮುಖ ಬರಹಗಾರರಿಗೆ ನೀಡುವ ಉದಯೋನ್ಮುಖ ವೀಚಿ ಸಾಹಿತ್ಯ ಪ್ರಶಸ್ತಿಗೆ ಡಾ.ವಿ.ಎ.ಡಾ.ಲಕ್ಷ್ಮಣ್ ಅವರ ಅಪ್ಪನ ಅಂಗಿ ಕವನ ಸಂಕಲನ ಆಯ್ಕೆ ಯಾಗಿದ್ದು ಪ್ರಶಸ್ತಿ ಪತ್ರದ ಜೊತೆಗೆ ಐದು ಸಾವಿರ ರೂಗಳು ಒಳಗೊಂಡಿದೆ.