ವೀರಶೈವ ಪ್ರತ್ಯೇಕ ಧರ್ಮವಲ್ಲ, ಲಿಂಗಾಯತ ಧರ್ಮದ ಪಂಗಡ: ಎಮ್.ವಿ.ಗೋಗರಶೆಟ್ಟಿ

ಹೊಸದಿಗಂತ ವರದಿ ಹುಬ್ಬಳ್ಳಿ:
ವೀರಶೈವ ಎಂಬುವುದು ಲಿಂಗಾಯತ ಧರ್ಮದ ಒಂದು ಪಂಗಡವಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವನ್ನು ಅಖಿಲ ಭಾರತ ಲಿಂಗಾಯತ ಮಹಾಸಭಾ ಎಂದು ಹೆಸರು ಬದಲಾಯಿಸಬೇಕು ಎಂದು ಅಖಿಲ ಭಾರತ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಎಮ್.ವಿ.ಗೋಗರಶೆಟ್ಟಿ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಲಿಂಗಾಯತ ಮಹಾಸಭಾ ಹಿಂದಿನಿಂದಲೂ ಬಂದಂತಹ ಧರ್ಮವಾಗಿದೆ. ಆದರೆ ಇತ್ತಿಚೆಗೆ ಕೆಲವು ಮುಖಂಡರು ಅಖಿಲ ಭಾರತ ಲಿಂಗಾಯತ ಮಹಾಸಭಾವನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಎಂದು ಹೆಸರು ಬದಲಿಸಿದ್ದಾರೆ. ಈಗಾಗಲೇ ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದೇವೆ. ಕೋರ್ಟ್ ನಲ್ಲಿ ನಮ್ಮ ಪರವಾಗಿ ತೀರ್ಪು ಬರುವ ನಿರೀಕ್ಷೆ ಇದೆ ಎಂದರು.

ವೀರಶೈವ ಎಂಬುದು ಲಿಂಗಾಯತ ಧರ್ಮದ ಪಂಗಡ ಎಂಬುದಕ್ಕೆ ಸಾಕಷ್ಟು ಸಾಕ್ಷಿ ಆಧಾರಗಳಿವೆ, ಗ್ರಂಥಗಳಿವೆ. ಕೇಂದ್ರ ಸರ್ಕಾರದ ನಿರ್ದೇಶನಗಳಿವೆ. ಹಾಗಾಗಿ ವೀರಶೈವ ಲಿಂಗಾಯತ ಧರ್ಮ ಎಂಬುದು ಸಮಂಜಸ ಅಲ್ಲ ಎಂದರು.
ಅಖಿಲ ಭಾರತ ಜಾಗತಿಕ ಲಿಂಗಾಯತ ಮಹಾಸಭಾದ ಬಿ.ಬಿ‌.ಶಿರೂರ, ಎಸ್.ವಿ.ಕೊಟಗಿ, ಎಸ್.ವಿ‌.ಜೋಡಳ್ಳಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!