ತರಕಾರಿ ಎಗ್‌ ಕಾಂಬಿನೇಷನ್ ಪಡ್ಡು ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಸಾಮಾಗ್ರಿಗಳು:
ಕ್ಯಾರೆಟ್: ಎರಡು
ಮೊಟ್ಟೆ: ನಾಲ್ಕು, ಅಕ್ಕಿ ಹಿಟ್ಟು-ಒಂದು ಕಪ್
ಕ್ಯಾಪ್ಸಿಕಂ, ಟೊಮೆಟೊ, ಈರುಳ್ಳಿ: ಒಂದು ಕಪ್,
ಬೆಳ್ಳುಳ್ಳಿ : ಎರಡು‌
ಬೆಣ್ಣೆ: ಎರಡು ಚಮಚ,
ಉಪ್ಪು: ರುಚಿಗೆ ತಕ್ಕಷ್ಟು
ಮೆಣಸಿನಕಾಯಿ: ಒಂದು ಟೀಚಮಚ,
ಖಾರದ ಪುಡಿ: ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಬೆಣ್ಣೆಯನ್ನು ಬಿಸಿ ಮಾಡಿದ ನಂತರ ಸಣ್ಣದಾಗಿ ಹೆಚ್ಚಿಕೊಂಡ ಬೆಳ್ಳುಳ್ಳಿ , ಈರುಳ್ಳಿ, ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಟೊಮೆಟೊ ತುಂಡುಗಳನ್ನು ಸೇರಿಸಿ, ಸ್ವಲ್ಪ ಉಪ್ಪು ಸೇರಿಸಿ ಚೆನ್ನಾಗಿ ಫ್ರೈ ಮಾಡಿ ಮತ್ತು ಪಕ್ಕಕ್ಕೆ ಇರಿಸಿ. ತಣ್ಣಗಾದ ಬಳಿಕ ಆ ಮಿಶ್ರಣಕ್ಕೆ ಅಕ್ಕಿ ಹಿಟ್ಟು, ಪುಡಿ ಮಾಡಿದ ಮೊಟ್ಟೆ, ಮೆಣಸಿನ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.(ಅವಶ್ಯಕತೆಯಿದ್ದರೆ ಸ್ವಲ್ಪ ಅಡುಗೆ ಸೋಡಾ ಬಳಸಿ) ಈಗ ಒಲೆಯ ಮೇಲೆ ಪಟ್ಟು ಮಾಡುವ ಬಾಣಲೆ ಇಟ್ಟು  ಅದು ಬಿಸಿಯಾದ ನಂತರ, ಮಿಶ್ರಣವನ್ನು ಪಡ್ಡು ಮಾಡುವ ರಂಧ್ರಗಳಿಗೆ ಸುರಿಯಿರಿ ಮತ್ತು ಅದನ್ನು ಎರಡೂ ಬದಿಗಳಲ್ಲಿ ಫ್ರೈ ಮಾಡಿ ಕ್ಯಾರೆಟ್ ಎಗ್ ಪಡ್ಡು ತಯಾರಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!