ಮಕ್ಕಳು ಅಥವಾ ಯಾರೇ ಆಗಿರಲಿ ತರಕಾರಿ ತಿನ್ನೋದಕ್ಕೆ ಇಷ್ಟಪಡಲಿಲ್ಲ ಎಂದರೆ ಸೂಪ್ ಮಾಡಿ ಕುಡಿಸಿಬಿಡಿ. ದೇಹಕ್ಕೆ ಬೇಕಾದ ನ್ಯೂಟ್ರಿಯಂಟ್ಸ್ ಸಿಗುತ್ತದೆ. ಜೊತೆಗೆ ಟೇಸ್ಟ್ ಕೂಡ ಚೆನ್ನಾಗಿರುತ್ತದೆ. ವೆಜ್ಜಿ ಕಾರ್ನ್ ಸೂಪ್ ಮಾಡೋದು ಹೇಗೆ ನೋಡೋಣ ಬನ್ನಿ..
ಮಾಡುವ ವಿಧಾನ
ಕ್ಯಾರೆಟ್, ಬೀನ್ಸ್, ಕಾರ್ನ್ ಆಲೂ,ಬಟಾಣಿ, ಶುಂಟಿ ಬೆಳ್ಳುಳ್ಳಿ ಸಿಪ್ಪೆ ತೆಗೆದು ಸಣ್ಣಗೆ ಕತ್ತರಿಸಿ.
ನಂತರ ಪಾತ್ರೆಗೆ ಒಂದು ಸ್ಪೂನ್ ಎಣ್ಣೆ ಹಾಕಿ ಈ ತರಕಾರಿಗಳನ್ನು ಹಾಕಿ ಬಾಡಿಸಿ.
ನಂತರ ಸ್ವಲ್ಪ ಉಪ್ಪು ಹಾಕಿ.
ನಂತರ ಅದಕ್ಕೆ ನೀರು ಹಾಕಿ.
ನಂತರ ಕಾರ್ನ್ಸ್ಟಾರ್ಚ್ ಹಾಕಿ.
ನಿಮಗೆ ತರಕಾರಿ ಎಷ್ಟು ಬೆಂದರೆ ಸರಿಯೋ ಅಲ್ಲಿಯವರೆಗೂ ಬೇಯಿಸಿ.
ಇದೀಗ ಸ್ವಲ್ಪ ಸಕ್ಕರೆ,ಉಪ್ಪು ಹಾಗೂ ಪೆಪ್ಪರ್ ಹಾಕಿ.
ಇದನ್ನು ಬೌಲ್ಗೆ ಹಾಕಿಕೊಂಡು ಬಿಸಿ ಬಿಸಿ ಕುಡಿಯಬಹುದು.