Thursday, August 11, 2022

Latest Posts

ವಾಹನ ಸಂಚಾರಕ್ಕೆ ಸಂಕಷ್ಟ ತಂದ ರಸ್ತೆ ಇಕ್ಕೆಲಗಳಲ್ಲಿ ಬೆಳೆದ ಕಾಡು!

ಹೊಸ ದಿಗಂತ ವರದಿ, ಶ್ರೀಮಂಗಲ:

ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪರಕಟಕೇರಿ ಗ್ರಾಮದ ಮುಖ್ಯ ರಸ್ತೆಯ ಎರಡು ಬದಿ ಕಾಡು ಬೆಳೆದಿದ್ದು,
ಈ ರಸ್ತೆಯಲ್ಲಿ ವಾಹನಗಳ ಚಲಿಸುವುದೇ ಕಷ್ಡವಾಗಿದೆ.
ಸರಕಾರಿ ಮತ್ತು ಖಾಸಗಿ ಬಸ್ಸುಗಳು ರಸ್ತೆಯ ಒತ್ತಿನಲ್ಲಿರುವ ಮರದ ಕೊಂಬೆಗಳಿಗೆ ಒರಸಿಕೊಂಡು ಸಾಗುವಂತಾದರೆ, ಇತರ
ವಾಹನಗಳು ಸಂಕಷ್ಟದಿಂದ ಸಂಚರಿಸಬೇಕಾಗಿದೆ.
ಈ ರಸ್ತೆಯಲ್ಲಿ ಬಸ್ಸು ಬಂದರೆ, ಎದುರಿನಿಂದ ಬರುವ ಯಾವುದೇ ವಾಹನಕ್ಕೆ ಜಾಗ ಬಿಟ್ಟುಕೊಡಲು ಎರಡೂ ವಾಹನಗಳು ಕಾಡಿಗೆ ನುಗ್ಗಿಸಬೇಕಿದೆ.
ಈ ಸಂದರ್ಭ ಮರಗಳಿಗೆ ತಾಗಿ ವಾಹನಗಳಿಗೆ ಜಖಂ ಆಗುತ್ತಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕೂಡಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss