ಹೊಸದಿಗಂತ ಡಿಜಿಟಲ್ ಡೆಸ್ಕ್:
ವೆಂಕಟೇಶ್ ಅಯ್ಯರ್, ಅಂಗ್‌ಕ್ರಿಶ್ ರಘುವಂಶಿ ಅರ್ಧಶತಕಗಳ ನೆರವಿನಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಹೈದರಾಬಾದ್ ವಿರುದ್ಧ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 200 ರನ್ ಗಳಿಸಿತು.
ಟಾಸ್ ಸೋತು ಇನ್ನಿಂಗ್ಸ್ ಆರಂಭಿಸಿದ ಕೆಕೆಆರ್ ಆರಂಭಿಕ ಆಟಗಾರ ಡಿ ಕಾಕ್ ಒಂದು ರನ್ ಗಳಿಸಿದ್ದಾಗಕ್ಯಾಚ್ ನೀಡಿ ಔಟಾದರು. ಸುನೀಲ್ ನರೈನ್ ಕೇವಲ 7 ರನ್ ಗಳಿಸಿ ಕ್ಯಾಚ್ ನೀಡಿ ಔಟಾದರು. ನಾಯಕ ರಹಾನೆ 27 ಎಸೆತಗಳಲ್ಲಿ 38 ರನ್ ಗಳಿಸಿ ಇನ್ನಿಂಗ್ಸ್ ಆಡಿ ಚೇತರಿಕೆ ನೀಡಿದರು. ಆದರೆ ಅಂಗ್ಕ್ರಿಶ್ ರಘುವಂಶಿ 32 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಿತ 50ರನ್ಗಳಿಸುವ ಮೂಲಕ ತಂಡವನ್ನ ಆರಂಭಿಕ ಆಘಾತದಿಂದ ಚೇತರಿಕೆ ನೀಡಿದಲ್ಲದೆ, ದೊಡ್ಡ ಮೊತ್ತಕ್ಕೂ ಭುನಾದಿಯಾಕಿದರು.
ನಂತರ ವೆಂಕಟೇಶ್ ಅಯ್ಯರ್ ಮತ್ತು ರಿಂಕು ಸಿಂಗ್ ಕೊನೆಯವರೆಗೂ ಎಚ್ಚರಿಕೆಯಿಂದ ಆಡಿ,ತಂಡದ ಮೊತ್ತವನ್ನ 200ಕ್ಕೆ ತರಿಸಿದರು. ಒಟ್ಟಾರೆ 29 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಿತ 60 ರನ್ ಗಳಿಸಿ ಔಟಾದರು. ರಿಂಕು ಸಿಂಗ್ 17 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 32 ರನ್ ಗಳಿಸಿದರು.