ಬಾಲಿವುಡ್ ಹಿರಿಯ ನಟ ಮಿಥಿಲೇಶ್ ಚತುರ್ವೇದಿ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಹಿರಿಯ ಬಾಲಿವುಡ್ ನಟ ಮಿಥಿಲೇಶ್ ಚತುರ್ವೇದಿ ವಿಧಿವಶರಾಗಿದ್ದಾರೆ.
ಮೂರು ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಈ ನಟ, ‘ಕೋಯಿ ಮಿಲ್ ಗಯಾ’, ‘ಗದರ್ ಏಕ್ ಪ್ರೇಮ್ ಕಥಾ’, ‘ಸತ್ಯ’, ‘ಬಂಟಿ ಔರ್ ಬಬ್ಲಿ’, ‘ಕ್ರಿಶ್’ ಮೊದಲಾದ ಚಿತ್ರಗಳಲ್ಲಿ‌ತಮ್ಮ‌ನಟನೆಯ ಛಾಪು ಮೂಡಿಸಿದ್ದಾರೆ.
ಲಕ್ನೋದಲ್ಲಿ ಅವರು ದಿಢೀರ್ ಅಸ್ವಸ್ಥರಾಗಿದ್ದು, ಹೃದಯಾಘಾತಕ್ಕೊಳಗಾಗಿ ಅವರು ಮೃತಪಟ್ಟಿದ್ದಾರೆ.
ಸಿನೆಮಾ ಮಾತ್ರವಲ್ಲದೆ, ‘ಸ್ಕ್ಯಾಮ್1992’ವೆಬ್ ಸಿರೀಸ್‌ನಲ್ಲಿ ನಟಿಸಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!