ಹೊಸ ದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೋಕಳ ನಿವಾಸಿ ಹಿರಿಯ ಕೃಷಿಕ, ಜನಾನುರಾಗಿ ಪಕ್ರಬ್ಬ ಶನಿವಾರ ವಿಧಿವಶರಾಗಿದ್ದಾರೆ.
ಅವರಿಗೆ 78 ವರ್ಷ ಪ್ರಾಯವಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ಸಮಯಗಳಿಂದ ತಮ್ಮ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಕೃಷಿ ಕ್ಷೇತ್ರದಲ್ಲಿ ಸಕ್ರಿಯರಾಗಿ, ನಾಡಿನ ಹಿರಿ ಕಿರಿಯರಿಗೆ ಅತ್ಯಂತ ಆತ್ಮೀಯ ವ್ಯಕ್ತಿಯಾಗಿ, ಅಜಾತಶತ್ರುವಾಗಿ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ, ಮೂವರು ಹೆಣ್ಣು, ಮೂವರು ಗಂಡು ಮಕ್ಕಳ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಅಶ್ರಫ್, ಸದಸ್ಯ ಮಹಮ್ಮದ್ ಮಂಚಿ,ಕೊಳ್ನಾಡು ಗ್ರಾಮಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಖಾದರ್ ಮೂಸಾ, ಧಾರ್ಮಿಕ ಮುಖಂಡರ ಸಹಿತ ಜಾತಿ, ಧರ್ಮ ಬೇಧವಿಲ್ಲದೆ ಗಣ್ಯರು ಅವರ ಮನೆಗೆ ಆಗಮಿಸಿ ಅಂತಿಮ ದರುಶನ ಪಡೆದರು.