ಹಿರಿಯ ಪತ್ರಕರ್ತ ವಿನಯ್‌ ಕುಮಾರ್ ಸೇಮಿತ ಹೃದಯಾಘಾತದಿಂದ ನಿಧನ

ಹೊಸದಿಗಂತ ವರದಿ, ಪುತ್ತೂರು: 
ವೇಣೂರು ಕರಿಮಣೇಲುಗುತ್ತು ನಿವಾಸಿ ವಿನಯ್‌ ಕುಮಾರ್ ಸೇಮಿತ (೭೦) ಹೃದಯಾಘಾತದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.
ಅವರು ಪತ್ನಿ ಓರ್ವ ಪುತ್ರ, ಓರ್ವ ಪುತ್ರಿ ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.
ಕರಿಮೆಣೇಲುಗುತ್ತು ಮನೆಯಲ್ಲಿ ಅವರು ಇತ್ತೀಚೆಗೆ ಮುನಿಗಳ ಆಹಾರದಾನ ವ್ಯವಸ್ಥೆ ಮಾಡಿದ್ದರು. ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ತ್ಯಾಗಿಗಳು ಹಾಗೂ ಮುನಿವೃಂದದವರ ಸೇವೆಯಲ್ಲಿ, ಹಲವಾರು ಸಂಘ-ಸಂಸ್ಥೆಗಳ ಸಕ್ರಿಯ ಸದಸ್ಯರಾಗಿ ಅವರು ಚಿರಪರಿಚಿತರಾಗಿದ್ದರು. ಕೃಷಿ ಮತ್ತು ತೋಟಗಾರಿಕೆಯಲ್ಲಿಯೂ ಅವರಿಗೆ ವಿಶೇಷ ಆಸಕ್ತಿ ಇತ್ತು.ಇತ್ತೀಚೆಗೆ ವೇಣೂರಿನಲ್ಲಿ ನಡೆದ ಭಗವಾನ್ ಬಾಹುಬಲಿಸ್ವಾಮಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಸಮೂಹ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿ ಸಕ್ರಿಯ ಸಹಕಾರ ನೀಡಿದದ್ದರು.
ಅಗಲಿದ ಅವರ ಆತ್ಮ ಕ್ಕೆ ಉತ್ತಮ ಸದ್ಗತಿ ಪ್ರಾಪ್ತಿ ಯಾಗಲಿ ಎಂದು ಮೂಡಬಿದಿರೆ ಜೈನ ಮಠದ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ  ಪಂಡಿತಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!