Monday, July 4, 2022

Latest Posts

ಕಲಬುರಗಿ| ವಿಶ್ವ ಹಿಂದೂ ಪರಿಷತ್ ವತಿಯಿಂದ ಗುರು ಪೂರ್ಣಿಮೆ ನಿಮಿತ್ತ ಗುರುವಂದನೆ ಕಾರ್ಯಕ್ರಮ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಕಲಬುರಗಿ:

ನಗರದ ಶಹಾಬಜಾರ ಸೊಗಸನಗೇರಿಯ ಕಡಗಂಚಿ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ನಗರ ಘಟಕದ ವತಿಯಿಂದ ವಿವಿಧ ಮಠಾಧೀಶರಿಗೆ ಗುರು ಪೂಣಿ೯ಮೆ ನಿಮಿತ್ತ ಗುರುವಂದನೆಯನ್ನು ಸಲ್ಲಿಸಲಾಯಿತು.

ಕಡಗಂಚಿ ಶ್ರೀ ಮಠದ ವೀರ ತಪಸ್ವಿ ವೀರಭದ್ರ ಶಿವಾಚಾರ್ಯರು, ಜಗದ್ಗುರು ಶ್ರೀಶೈಲಂ’ನ ಸಾರಂಗಧರ ದೇಶಿಕೇಂದ್ರ,ದ ಮಹಾಂತ ಶಿವಾಚಾರ್ಯರು, ಹಾಗೂ ಕಿಣ್ಣಿ ಸುಲ್ತಾನದ ಶಾಂತಲಿಂಗೇಶ್ವರ ಮಠದ ಶಿವಶಾಂತಲಿಂಗ ಸ್ವಾಮಿಜೀಗಳಿಗೆ ಗುರುವಂದನೆಯನ್ನು ಸಲ್ಲಿಸಿ ಪರಿಷತ,ನ ಪದಾಧಿಕಾರಿಗಳು ಆಶಿವಾ೯ದ ಪಡೆದುಕೊಂಡರು.

ಈ ಸಂದರ್ಭದಲ್ಲಿ ಶಿವರಾಜ್ ಸಂಗೋಳಗಿ, ಶಾಂತಕುಮಾರ ಬಿರಾದಾರ, ವಿನೋದ ಸಂಕಾಣಿ, ಗುರು ಸಾಗರೇ, ಸುದೀಪ್ ಚಿಂಚೋಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss