ಪತ್ನಿ ಜೊತೆ ವಿಡಿಯೋ ಕಾಲ್, ಫ್ಯಾನ್ಸ್‌ಗೂ ಅನುಷ್ಕಾರಿಂದ ಹಲೋ ಹೇಳಿಸಿದ ವಿರಾಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾಗೆ ಅವರದ್ದೇ ಆದ ಫ್ಯಾನ್ ಬೇಸ್ ಇದೆ. ವಿರಾಟ್ ಅನುಷ್ಕಾ ಜೊತೆ ವಿಡಿಯೋ ಕಾಲ್‌ನಲ್ಲಿದ್ದು, ಫ್ಯಾನ್ಸ್‌ಗಾಗಿ ಅನುಷ್ಕಾರನ್ನು ಜನರಿಗೆ ತೋರಿಸಿ ಹಾಯ್ ಹೇಳಿಸಿದ್ದಾರೆ.

ಈ ವಿಡಿಯೋ ವೈರಲ್ ಆಗಿದ್ದು, ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ವಿರಾಟ್ ಟೀಂ ಇಂಡಿಯಾ ಬಸ್‌ನಲ್ಲಿ ಕುಳಿತಿದ್ದು, ಪತ್ನಿ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಬಸ್ ನಿಲ್ಲಿಸಿದಾಗ ವಿರಾಟ್ ವಿರಾಟ್ ಎಂದು ಅಭಿಮಾನಿಗಳು ಕೂಗಿದ್ದಾರೆ.

ಆಗ ಕಾಲ್ ಕಟ್ ಮಾಡದ ವಿರಾಟ್ ಅನುಷ್ಕಾರನ್ನು ಫ್ಯಾನ್ಸ್‌ಗೆ ತೋರಿಸಿದ್ದಾರೆ. ಇದರಿಂದ ಅಭಿಮಾನಿಗಳು ಡಬಲ್ ಖುಷಿಯಾಗಿದ್ದಾರೆ. ಈ ವಿಡಿಯೋಗೆ ನೂರಾರು ಕಮೆಂಟ್ ಬರುತ್ತಿದ್ದು, ಪತ್ನಿ ಹಾಗೂ ಫ್ಯಾನ್ಸ್ ಎಲ್ಲರ ಖುಷಿಯನ್ನು ತೂಗಿಸುವ ಕಲೆ ವಿರಾಟ್‌ಗಿದೆ, ವಿರಾಟ್ ಸರಳಜೀವಿ ಎಂದೆಲ್ಲಾ ಹೇಳಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!