Wednesday, August 17, 2022

Latest Posts

ಗಿಲಾನಿ ಸತ್ತೊಡನೆ ವೈರಲ್ ಆಯ್ತು ಪತ್ರಕರ್ತರೊಬ್ಬರ ಪ್ರಶ್ನೆಯ ವಿಡಿಯೋ ಕ್ಲಿಪ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಜಮ್ಮು ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಸಯದ್ ಅಲಿ ಶಾ ಗಿಲಾನಿ ಅವರು ಮೃತಪಟ್ಟು 24 ಗಂಟೆ ಮುಗಿಯುವಷ್ಟರಲ್ಲಿ ಅವರ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಲ್ಲರಿಗೂ ಗೊತ್ತಿರುವ ಹಾಗೆ ಗಿಲಾನಿ ಕಳೆದ ಮೂರು ದಶಕಗಳಿಂದ ಜಮ್ಮು ಕಾಶ್ಮೀರವನ್ನು ಪ್ರತ್ಯೇಕ ಮಾಡುವ ನಿಟ್ಟಿನಲ್ಲಿ ಸಾಕಷ್ಟು ಕುತಂತ್ರಗಳನ್ನು ಮಾಡಿದ್ದು, ಜೊತೆಗೆ ತೆಹ್ರಿಕ್ –ಎ- ಹುರಿಯತ್ ಎನ್ನುವ ಕಟ್ಟರ್ ಪ್ರತ್ಯೇಕವಾದಿ ಸಂಘಟನೆಯನ್ನೂ ಕಟ್ಟಿರುವುದು ಇಂದಿಗೂ ಬಹಿರಂಗವಾಗಿಯೇ ಇದೆ.
ಆದರೆ ಇಂದು ಈ ನಾಯಕ ಗಿಲಾನಿ ಮೃತಪಟ್ಟಿದ್ದು, ಈ ವೇಳೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಯೊಂದರ ವೀಡಿಯೋ ವೈರಲ್ ಆಗುತ್ತಿದೆ.

ವೀಡಿಯೋದಲ್ಲಿ ಏನಿದೆ?: 2011ರ ದೆಹಲಿಯಲ್ಲಿ ನಡೆದ  ಸಭೆಯಲ್ಲಿ ನಾಯಕ ಗಿಲಾನಿ ಸೇರಿದಂತೆ ನೂರಾರು ಮಂದಿ ಪತ್ರಕರ್ತರು ಭಾಗಿಯಾಗಿರುತ್ತಾರೆ. ಈ ವೇಳೆ ಕಾಶ್ಮೀರ ಮೂಲದ ಆದಿತ್ಯ ರಾಜ್ ಕೌಲ್ ಕಶ್ಮೀರಿ ಪಂಡಿತ್ ಕುಟುಂಬಕ್ಕೆ ಸೇರಿದ ಪತ್ರಕರ್ತರು ಗಿಲಾನಿ ವಿರುದ್ಧ ಸಿಡಿದೆದ್ದಿದ್ದಾರೆ.

“ಒಸಾಮಬಿನ್ ಲಾಡನ್ ನ ಮತ್ತೊಂದು ರೂಪವಾಗಿರುವ ವ್ಯಕ್ತಿಯೋರ್ವ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವುದನ್ನು ಕೇಳೋಕೆ ನನಗೆ ನೋವಾಗುತ್ತದೆ. ನಾನು ಕಶ್ಮೀರಿ ಪಂಡಿತ್ ಆಗಿದ್ದು, ನಾನು ಸಾಮಾನ್ಯ ಕಾಶ್ಮೀರಿ ಪ್ರಜೆಯಾಗಿ ಮಾತನಾಡುತ್ತಿದ್ದೇನೆ. ನಾನು 5 ತಿಂಗಳ ಮಗುವಿದ್ದಾಗ ನಮ್ಮಂತಹ ನೂರಾರು ಮಕ್ಕಳನ್ನು ಕಾಶ್ಮೀರದಿಂದ ಹೊರ ಹಾಕಲಾಯಿತು. ಈ ವೇಳೆ ನಮ್ಮ ತಾಯಂದಿರು ನಮ್ಮನ್ನು ಬಟ್ಟೆಯಲ್ಲಿ ಸುತ್ತಿ ಹೊರನಡೆದೆವು. ಏಕೆಂದರೆ ನಿಮ್ಮಂತವರು ನನ್ನನ್ನು ಕೊಲ್ಲಬಾರದೆಂದು. ಆಗ ನೂರಾರು ಕಾಶ್ಮೀರಿ ಮಹಿಳೆಯರನ್ನು ಅತ್ಯಾಚಾರ ಮಾಡಲಾಯಿತು.

ನನಗೆ ಅವರಿಂದ ಉತ್ತರ ಬೇಡ ಬದಲಿಗೆ ಅಬ್ದುಲ್ ಘನಿ ಲೋನ್ ಅವರನ್ನು ಏಕೆ ಕೊಂದಿರಿ? ಅವರು ನಿಮ್ಮವರೇ ಅಲ್ಲವಾ ಹುರಿಯತ್ ನವರು ಅಲ್ವಾ? ನೀವು ಅವರನ್ನು ಕೊಂದಿದ್ದ ಉದ್ದೇಶವೇನೆಂದರೆ, ಅವರು ಭಾರತದ ಪರವಾಗಿ ಮಾತಾಡುತ್ತಾರೆ ಅಂತ. ನೀವು ಕೇವಲ ಒಂದಕ್ಕೆ ಮಾತ್ರ ಸೀಮಿತವಾಗಿ ಇರುತ್ತೀರಿ ಅನ್ನುವುದಾದರೆ ಅದು ನಿಮ್ಮ ಪಾಕಿಸ್ಥಾನದ ಗಡಿಯಲ್ಲಿರುವ ನಿಮ್ಮ ಮಾಸ್ಟರ್ ಗಳಿಗೆ ಮಾತ್ರ. ಅವರ ಮಾತುಗಳನ್ನು ನೀವು ಪಾಲಿಸುತ್ತೀರೆ ಹೊರತು ಕಾಶ್ಮೀರದ ಜನರ ಮಾತುಗಳನ್ನು ನೀವು ಕೇಳುವುದಿಲ್ಲ” ಎಂದು ತೀವ್ರವಾಗಿ ಕುಟುಕಿದರು.

ಈ ವಿಡಿಯೋವನ್ನು ಪತ್ರಕರ್ತ ಆದಿತ್ಯ ರಾಜ್ ಕೌಲ್ ಅವರೇ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋವನ್ನು ಸುಮಾರು 15 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!