Video ಸುದ್ದಿಕತೆ: ಭಾರತದಲ್ಲೂ ಹುಟ್ಟೀತಾ ಸ್ಪೇಸ್ ಎಕ್ಸ್ ಥರದ ಬಾಹ್ಯಾಕಾಶ ಕಂಪನಿ?

0
247

ಹೊಸದಿಗಂತ ಆನ್ಲೈನ್ ಡೆಸ್ಕ್

ಅಮೆರಿಕದಲ್ಲಿ ನಾಸಾದ ಜತೆ ಜತೆಗೇ ಸ್ಪೇಸ್ ಎಕ್ಸ್ ಥರದ ಖಾಸಗಿ ಬಾಹ್ಯಾಕಾಶ ಸಂಸ್ಥೆಯೂ ಇದೆ. ಭಾರತದಲ್ಲಿ ಏಕಿಲ್ಲ? ಹಾಗಂತ ನಿಮ್ಮಲ್ಲಿ ಪ್ರಶ್ನೆ ಹುಟ್ಟಿದೆಯಾ? ಚಿಂತೆ ಬೇಡ, ಬಾಹ್ಯಾಕಾಶ ವಿಭಾಗದಲ್ಲಿ ಇದುವರೆಗೆ ಆಗಿರದಿದ್ದ ಸುಧಾರಣೆಗಳನ್ನು ತಂದು ಭಾರತ ಆ ಹಾದಿಯಲ್ಲಿದೆ. ಇಸ್ರೋ ಸಂಪನ್ಮೂಲಗಳನ್ನು ಬಳಸಿಕೊಂಡು ಖಾಸಗಿಯವರೂ ಬಾಹ್ಯಾಕಾಶದಲ್ಲಿ ತಮ್ಮ ಸಾಮರ್ಥ್ಯ, ಅನ್ವೇಷಣ ಶಕ್ತಿಗಳನ್ನು ಹೆಚ್ಚಿಸಿಕೊಳ್ಳುವುದಕ್ಕೆ ಅವಕಾಶ ತೆರೆದಿರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿರುವ ಬಾಹ್ಯಾಕಾಶ ಒಕ್ಕೂಟದಲ್ಲಿ ಖಾಸಗಿ ಕಂಪನಿಗಳೂ ಇವೆ. ಭಾರತದ ಪ್ರತಿಭೆಗಳು ಎಲ್ಲಿಂದಲೇ ಬರಲಿ, ಅವರ ಸಾಮರ್ಥ್ಯವನ್ನು ಬಾಹ್ಯಾಕಾಶ ಸಂಶೋಧನೆಗಳಲ್ಲಿ ಬಳಸಿಕೊಳ್ಳುವ ಕೆಲಸಕ್ಕೆ ನಾಂದಿ ಹಾಡಿದಂತಾಗಿದೆ…. 

 

LEAVE A REPLY

Please enter your comment!
Please enter your name here