Monday, July 4, 2022

Latest Posts

ಉರುಳಿ ಬಿದ್ದ ಗೆಳೆಯನಿಗೆ ಸಹಾಯ ಮಾಡುವ ಆಮೆ: ಈ ವೈರಲ್ ದೃಶ್ಯಕ್ಕೆ ನೆಟ್ಟಿಗರು ಫಿದಾ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಸಂಕಷ್ಟದ ಸಮಯದಲ್ಲಿ ಸ್ನೇಹಿತರು ಜೊತೆಗಿದ್ದರೆ ಆ ಧೈರ್ಯವೇ ಬೇರೆ. ನಿನ್ನ ಕಷ್ಟಕ್ಕ ನಾನು ಹೆಗಲಾಗುತ್ತೇನೆಂಬ ಸ್ನೇಹಿತನ ಒಂದು ನೋಟ ಸಾಕು ಅದು ಜೀವ ಸ್ಪರ್ಶದಂತ ಅನುಭವ ಕೊಡುತ್ತದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಸ್ನೇಹಿತರ ಅದ್ಭುತ ದೃಶ್ಯಗಳು ವೈರಲ್ ಆಗುತ್ತಲೇ ಇರುತ್ತದೆ.

ಇದೀಗ ಅಂತಹದ್ದೇ ಆಮೆಗಳ ಹೃದಯಂಗಮ ದೃಶ್ಯ ವೈರಲ್ ಆಗಿದೆ. ಈ 14 ಸೆಕೆಂಡಿನ  ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಧಾ ರಾಮನ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಆಮೆಯೊಂದು ಉರಿಳಿ ಬೀಳುತ್ತದೆ. ಎಷ್ಟೇ ಪ್ರಯತ್ನ ಪಟ್ಟರು ನಿಲ್ಲುವುದಕ್ಕೆ ಆಗುವುದಿಲ್ಲ. ಈ ಆಮೆಯ ಕಷ್ಟ ನೋಡಿ, ಮರುಕ ಹುಟ್ಟಿ ಮತ್ತೊಂದು ಆಮೆ ಸಹಾಯಕ್ಕೆ ಬರುತ್ತದೆ. ಬಿದ್ದಿರುವ ಆಮೆಯನ್ನು ತನ್ನ ಮುಖದಿಂದ ತಳ್ಳಿ ಸರಿಯಾಗಿ ನಿಲ್ಲಿಸುತ್ತದೆ.  ಈ ಸ್ನೇಹಿತರ ದೃಶ್ಯಕ್ಕೆ ನೆಟ್ಟಿಗರು ಫುಲ್ ಪಿಧಾ ಆಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss