ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಇದೀಗ ಸಾಮಾಜಿಕ ಜಾಲತಾಣದಲ್ಲಿ ಮನಕಲಕುವ ವಿಡಿಯೋವೊಂದು ಹರಿದಾಡುತ್ತಿದೆ. ಈ ವಿಡಿಯೋವನ್ನು ರವೀಶ್ ಚಾವ್ಲಾ ಎಂಬುವವರು ತಮ್ಮ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿದ್ದು, ಕೊರೋನಾ ಮಹಾಮಾರಿಗೆ ತನ್ನ ಗರ್ಭಿಣಿ ಹೆಂಡತಿ ಹಾಗೂ ಜಗತ್ತು ನೋಡುವ ಮೊದಲೇ ಮಗುವನ್ನು ಕಳೆದುಕೊಂಡ ಕಣ್ಣೀರ ಕತೆಯನ್ನು ಬಿಚ್ಚಿಟ್ಟಿದ್ದಾರೆ.
ರವೀಶ್ ಅವರು ಶೇರ್ ಮಾಡಿರುವ ವಿಡಿಯೋದಲ್ಲಿ, ಸಾವಿಗೂ ಮುನ್ನ ದೀಪಿಕಾ ಅವರು ಕೊರೋನಾವನ್ನು ದಯವಿಟ್ಟು ನಿರ್ಲಕ್ಷ್ಯ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಈ ವಿಡಿಯೋವನ್ನು ದೀಪಿಕಾ ಅವರು ಸಾಯುವ ಮುನ್ನ ಅಂದ್ರೆ ಏಪ್ರಿಲ್ 17 ರಂದು ರೆಕಾರ್ಡ್ ಮಾಡಿದ್ದಾರೆ. ಪತಿ ರವೀಶ್ ಮದರ್ಸ್ ಡೇ ದಿನದಂದು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಹಚ್ಚಿಕೊಂಡಿದ್ದು, ” ನಾನು ಕೊರೋನಾದಿಂದ ನನ್ನ ಗರ್ಭಿಣಿ ಪತ್ನಿ ಹಾಗೂ ಜಗತ್ತನೇ ನೋಡಿರದ ನನ್ನ ಪುಟ್ಟ ಮಗುವನ್ನು ಕಳೆದುಕೊಂಡಿದ್ದೇನೆ. ನನ್ನ ಪತ್ನಿಗೆ ಏಪ್ರಿಲ್ 11ರಂದು ಕೊರೋನಾ ಪಾಸಿಟಿವ್ ಬಂದಿತ್ತು. ಏಪ್ರಿಲ್ 17 ರಂದು ಉಸಿರಾಡಲು ಕಷ್ಟವಾಗುತ್ತಿದ್ದರೂ ಸಹ ಈ ವಿಡಿಯೋವನ್ನು ಮಾಡಿದ್ದಳು. ಏಪ್ರಿಲ್ 26ರಂದು ಪತ್ನಿ ಮೃತಪಟ್ಟಳು”.
“ನನ್ನ ಪತ್ನಿ ತಾಯಿತನದ ಬಗ್ಗೆ ಬಹಳ ಭಕ್ತಿ ಹೊಂದಿದ್ದಳು. ಮೂರು ವರ್ಷದ ಮಗನನ್ನು ನನ್ನ ಬಳಿಯೇ ಬಿಟ್ಟು, ಹುಟ್ಟಲಿರುವ ಮಗುವಿನೊಂದಿಗೆ ಸ್ವರ್ಗಕ್ಕೆ ಹೋಗಿದ್ದಾಳೆ. ಹ್ಯಾಪಿ ಮದರ್ಸ್ ಡೇ ದೀಪಿಕಾ” ಎಂದು ರವೀಶ್ ಬರೆದುಕೊಂಡಿದ್ದಾರೆ.
ದೀಪಿಕಾ ವೃತ್ತಿಯಲ್ಲಿ ದಂತ ವೈದ್ಯೆ. ಕೊರೋನಾ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದರೂ ಕೂಡ ವೈರಸ್ ಅವಳ ಜೀವವನ್ನು ಬಲಿಪಡೆಯಿತು ಎಂದು ರವೀಶ್ ಹೇಳಿದ್ದಾರೆ.
I lost my pregnant wife and our unborn child to covid
She breathed her last on 26/4/21 and our unborn child a day earlier. She got covid positive on 11/4 and even during her suffering she had made the above video on 17/4 warning others not to take this covid lightly. #CovidIndia pic.twitter.com/Syg6yddMTD
— Ravish Chawla (@ravish_chawla) May 9, 2021
She was completely devoted to motherhood and went to heavens with our unborn child to take care of him and left our 3.5 year child to me.
Happy Mother's Day Dipika. pic.twitter.com/k2qnuwqWZl
— Ravish Chawla (@ravish_chawla) May 9, 2021