VIRAL VIDEO| ಇಂತಹ ಭಯಾನಕ ಪರಿಸ್ಥಿತಿಗಳನ್ನು ಎದುರಿಸುವುದು ಬಹಳ ಕಷ್ಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ವಲ್ಪ ಚಳಿ ಇದ್ದರೆ ಸಾಕು ಹೊರಗೆ ಹೆಜ್ಜೆ ಹಾಕಲು ಯೋಚಿಸುತ್ತೇವೆ. ಅಂಟಾರ್ಟಿಕಾದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ವಿಭಿನ್ನವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ವಿಡಿಯೋವೊಂದು ವೈರಲ್ ಆಗುತ್ತಿದೆ.

ಭೀಕರ ಚಳಿಗಾಳಿ ನಡುವೆ ಕೆಲಸ ಮಾಡುವುದು ತುಂಬಾ ಕಷ್ಟ. ಅಲ್ಲಿದ್ದವರ ಬದುಕು ಸದಾ ಪರೀಕ್ಷೆ ಎಂದೇ ಹೇಳಬೇಕು. 47ನೇ ಪೋಲಿಷ್ ಅಂಟಾರ್ಕ್ಟಿಕ್ ದಂಡಯಾತ್ರೆಯ ಮುಖ್ಯಸ್ಥ ತೋಮಾಸ್ಜ್ ಕುರ್ಜಾಬಾ ಹಂಚಿಕೊಂಡ ಇತ್ತೀಚಿನ ವೀಡಿಯೊವು ಭಯಾನಕವಾಗಿದೆ. tomaszkurczaba ತನ್ನ Instagram ಖಾತೆಯಲ್ಲಿ ‘ಅಂಟಾರ್ಟಿಕಾದಲ್ಲಿ ವಿಶಿಷ್ಟ ಕೆಲಸದ ದಿನ’ ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಕಿಂಗ್ ಜಾರ್ಜ್ ದ್ವೀಪದಲ್ಲಿ ಸೆರೆಹಿಡಿಯಲಾದ ಈ ಕ್ಲಿಪ್‌ನಲ್ಲಿ, ಒಬ್ಬ ವ್ಯಕ್ತಿ ಬಾಗಿಲಿನ ಮುಂದೆ ನಿಂತು ಅದನ್ನು ಮುಚ್ಚಲು ಪ್ರಯತ್ನಿಸುತ್ತಾನೆ. ನೋಡುಗರಿಗೆ ಅವನು ಚಲಿಸುತ್ತಿರುವ ರೈಲಿನ ಬಾಗಿಲನ್ನು ಮುಚ್ಚಲು ಪ್ರಯತ್ನಿಸುತ್ತಿದ್ದಾನೆ ಅನಿಸುತ್ತೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ, ಮನೆ ಬಾಗಿಲಿನ ಹೊರಗೆ ಬೀಸುತ್ತಿರುವ ಬಲವಾದ ಹಿಮಾವೃತ ಗಾಳಿ. ಆ ಸಮಯದಲ್ಲಿ ಆತನಿಗೆ ಸಹಾಯ ಮಾಡಲು ಇನ್ನೊಬ್ಬ ವ್ಯಕ್ತಿ ಕೈ ಕೊಟ್ಟಿದ್ದಾನೆ. ಈ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋಗೆ ಹಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಅವರು ರೈಲಿನಲ್ಲಿದ್ದಾರೆ ಎಂದು ನಾನು ಭಾವಿಸಿದೆವು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ನಿಜವಾಗಲೂ ಇಂತಹ ಸನ್ನಿವೇಶಗಳಲ್ಲಿ ದಿನವೂ ಪರೀಕ್ಷೆಯಂತೆ ದುಡಿಯುವವರ ಧೈರ್ಯವನ್ನು ಮೆಚ್ಚಲೇಬೇಕು.

https://www.instagram.com/reel/Cr_e_XhJyUs/?utm_source=ig_web_copy_link

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!