ಮಧ್ಯರಾತ್ರಿ ಮನೆಗಳ ಮೇಲೆ ದೆವ್ವ ತಿರುಗಾಟ: ವಿಡಿಯೋ ನೋಡಿ ಭಯಭೀತರಾದ ವಾರಣಾಸಿ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಾರಣಾಸಿಯ ಭೇಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಾರಣಾಸಿ ಅಭಿವೃದ್ಧಿ ಪ್ರಾಧಿಕಾರದ ಕಾಲೋನಿಯಲ್ಲಿ ಜನರು ಕಳೆದ ಕೆಲವು ದಿನಗಳಿಂದ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ. ದೆವ್ವದಂತಿರುವ ಆಕಾರ ಸುತ್ತಾಡುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಮನೆಯ ಛಾವಣಿಯ ಮೇಲೆ ಬಿಳಿ ಬಟ್ಟೆ ಧರಿಸಿದ ಭಯಾನಕ ಆಕೃತಿ ಕಂಡ ಜನ ದೆವ್ವ ಎಂದು ಭಯಭೀತರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇನ್ನು ಕೆಲವರು ಇದು ಯಾವುದೋ ಕಾಳಧನಿಕರ ಕೆಲಸ ಎನ್ನುತ್ತಾರೆ. ವಿಚಿತ್ರ ಆಕಾರದ ಬಗ್ಗೆ ಜನರು ಭಯಭೀತರಾಗಿರುವುದರಿಂದ, ವಿಷಯ ಏನೆಂದು ತಿಳಿಯಲು ಸ್ಥಳೀಯ ಪೊಲೀಸರು ಅಖಾಡಕ್ಕಿಳಿದಿದ್ದಾರೆ. ನಿವಾಸಿಗಳನ್ನು ಭಯಭೀತಗೊಳಿಸುತ್ತಿರುವವರು ಯಾರೇ ಆಗಿದ್ದರೂ ಅವರನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ ತಕ್ಕ ಶಿಕ್ಷೆ ವಿಧಿಸಲಾಗುವುದು ಎಂದಿದ್ದಾರೆ. ಈ ಸಂಬಂಧ ಈಗಾಗಲೇ ದಾಳಿಕೋರರ ವಿರುದ್ಧ ಬೇಲುಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೈರಲ್ ವೀಡಿಯೊದಲ್ಲಿ, ವಾರಣಾಸಿಯ ಕಟ್ಟಡವೊಂದರ ಮೇಲೆ ಬಿಳಿ ಬಟ್ಟೆಯನ್ನು ಧರಿಸಿರುವ ಪ್ರೇತದಂತಹ ಆಕೃತಿಯನ್ನು ಕಾಣಬಹುದು. ಇದನ್ನು ವ್ಯಕ್ತಿಯೊಬ್ಬ ವಿಡಿಯೋ ಮಾಡಿ ವಾಟ್ಸಾಪ್ ನಲ್ಲಿ ವೈರಲ್ ಮಾಡಿದ್ದಾನೆ. ಕಾಲೋನಿಯ ನಿವಾಸಿಗಳೆಲ್ಲ ಹೊರಗೆ ಬರಲು ಭಯಪಡುತ್ತಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!