ಕಿರ್ಪಾನ್ ಧರಿಸಿದ್ದ ಸಿಖ್ ಯುವಕನನ್ನು ಬಂಧಿಸಿದ ಅಮೆರಿಕ ಪೊಲೀಸರು: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿಖ್ ಯುವಕರು ತಮ್ಮ ಸಂಸ್ಕೃತಿಯ ಭಾಗವಾಗಿ ಕಿರ್ಪಾನ್ ಧರಿಸಿದ ಯುವಕನ ಕೈಗೆ ಪೊಲೀಸ್ ಸಿಬ್ಬಂದಿಯೊಬ್ಬರು ಕೈಗೆ ಕೋಳ ಹಾಕಿರುವ ಘಟನೆ ಅಮೆರಿಕದ ನಾರ್ತ್ ಕೆರೊಲಿನಾ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ಬಾಧಿತ ಯುವಕ ತನ್ನ ಟ್ವಿಟ್ಟರ್ ಖಾತೆಯಲ್ಲಿ ಘಟನೆಯ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ.

ಅನಾಮಿಕ ವ್ಯಕ್ತಿಯಿಂದ ಬಂದ ಕರೆ ಮೇರೆಗೆ ಅಲ್ಲಿನ ಪೊಲೀಸ್‌ ಸಿಬ್ಬಂದಿಯೊಬ್ಬರು ತನ್ನ ಬಳಿ ಬಂದು ಧರಿಸಿದ್ದ ಕಿರ್ಪಾನ್ ಅನ್ನು ತೆಗೆದುಹಾಕುವಂತೆ ತಾಕೀತು ಮಾಡಿದರು. ಅದನ್ನು ತೆಗೆಯಲು ನಿರಾಕರಿಸಿದ್ದರಿಂದ ನನ್ನನ್ನು ಬಂಧಿಸಲಾಯಿತು ಎಂದು ತಿಳಿಸಿದರು. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಪ್ರಪಂಚದಾದ್ಯಂತ ಸಿಖ್ಖರು ಈ ಘಟನೆಯನ್ನು ಖಂಡಿಸುತ್ತಿದ್ದಾರೆ.

ಕಿರ್ಪಾನ್ ಧರಿಸುವುದು ಸಿಖ್ಖರ ಸಂಸ್ಕೃತಿಯ ಭಾಗವಾಗಿದ್ದು, ಇದನ್ನು ತಿಳಿಯದೆ ಯುವಕನನ್ನು ಏಕೆ ಬಂಧಿಸಬೇಕು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಬಂದೂಕು ಹಿಡಿದು ತಿರುಗಾಡುವ ಅಮೆರಿಕನ್ನರನ್ನು ಬಂಧಿಸದ ಪೊಲೀಸರು, ಕಿರ್ಪಾನ್ ಧರಿಸಿದ್ದಕ್ಕಾಗಿ ಸಿಖ್ ಯುವಕನನ್ನು ಬಂಧಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!