Sunday, March 7, 2021

Latest Posts

ಪುನಶ್ಚೇತನ ಶಿಬಿರದಲ್ಲಿದ್ದ ಆನೆಯನ್ನು ಮನಬಂದಂತೆ ಥಳಿಸಿದ ಮಾವುತರು!! ಇಲ್ಲಿದೆ ವೈರಲ್ ವಿಡಿಯೋ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪುನಶ್ಚೇತನ ಶಿಬಿರದಲ್ಲಿದ್ದ ಆನೆಯನ್ನು ಇಬ್ಬರು ಮಾವುತರು ಮನಬಂದಂತೆ ಥಳಿಸುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟೆ ವೈರಲ್ ಆಗಿದೆ. ಈ ಮೂಕ ಪ್ರಾಣಿಗೆ ಅವರು ಹೊಡೆಯುತ್ತಿರುವ ದೃಶ್ಯ ನೋಡಿದರೆ ಕರುಳು ಚುರುಕ್ ಎನ್ನುತ್ತೆ.

ಈ ಘಟನೆ ನಡೆದಿರುವುದು ತಮಿಳುನಾಡಿನ ಕೊಯಮತ್ತೂರಿನಲ್ಲಿ. ಆನೆಯೊಂದನ್ನು ಮರವೊಂದಕ್ಕೆ ಕಟ್ಟಿ ಹಾಕಿಕೊಂಡು, ಇಬ್ಬರು ಮಾವುತರು ಮನ ಬಂದಂತೆ ಕೋಲಿನಿಂದ ಹೊಡೆಯುತ್ತಿದ್ದಾರೆ. ನೋವು ತಾಳಲಾರದೇ ಆ ಆನೆ ಜೋರಾಗಿ ಕೂಗುತ್ತಿದೆ. ಆದರೂ ಬಿಡದೇ ನಿರಂತರವಾಗಿ ಥಳಿಸುತ್ತಿದ್ದಾರೆ. 20 ಸೆಕೆಂಡಿನ ಈ ವಿಡಿಯೋ ಸಿಕ್ಕಾಪಟೆ ವೈರಲ್ ಆಗಿದ್ದು, ಮಾವುತರ ಈ ಅಮಾನವೀಯ ಕೃತ್ಯಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಮೆಟ್ಟುಪಾಳ್ಯಂನ ತೆಕ್ಕಂಪಟ್ಟಿಯಲ್ಲಿ ಅರಣ್ಯ ಇಲಾಖೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ವಯ  ಮಾವುತ ವಿನಿಲ್ ಕುಮಾರ್ (45) ಹಾಗೂ ಆತನ ಸಹಾಯಕ ಶಿವಪ್ರಸಾದ್ ನನ್ನು ಬಂಧಿಸಿದೆ.

19 ವರ್ಷದ ಈ ಹೆಣ್ಣಾನೆ ಜಯಮಾಲ್ಯತಾ,  ಶ್ರೀವಿಲಿಪುತ್ತೂರಿನ ಅಂಡಾಳ್ ದೇವಸ್ಥಾನದ್ದಾಗಿದ್ದು, ಫೆ.8ರಿಂದ ಆರಂಭವಾಗಿರುವ 13ನೇ ವಾರ್ಷಿಕ ಪುನಶ್ಚೇತನ ಶಿಬಿರಕ್ಕೆ ಕಳುಹಿಸಲಾಗಿತ್ತು. ಆದರೆ ಶಿಬಿರದಲ್ಲಿ ಆನೆಯನ್ನು ಈ ರೀತಿ ನಡೆಸಿಕೊಳ್ಳಲಾಗಿದೆ. ವನಂ ಟ್ರಸ್ಟ್‌ ಆಫ್ ಇಂಡಿಯಾದ ಸಂಸ್ಥಾಪಕ ಎಸ್, ಚಂದ್ರಶೇಖರ್ ಶೀಘ್ರವೇ ಪುನಶ್ಚೇತನ ಶಿಬಿರದಿಂದ ಆನೆ ಶಿಬಿರಕ್ಕೆ ಆನೆಯನ್ನು ವರ್ಗಾಯಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss