VIRAL VIDEO | ಕಾರಿಗೆ ಬೈಕು ಡಿಕ್ಕಿ ; 5 ಕಿ.ಮೀ ಹಿಂಬಾಲಿಸಿ ದಂಪತಿಗೆ ಬೆದರಿಸಿದ ಬೈಕ್‌ ಸವಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ತಡರಾತ್ರಿ ಕಾರಿನಲ್ಲಿ ಚಲುತ್ತಿರುವ ವೇಳೆ ಬೈಕ್‌ ಸವಾರನೊಬ್ಬ ಎದುರಿನಿಂದ ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ತದನಂತರ ಕಾರಿನಲ್ಲಿದ್ದ ದಂಪತಿಯನ್ನು ಬೆದರಿಸಲು ಮುಂದಾಗಿರುವ ಘಟನೆ
ಬೆಂಗಳೂರು ನಗರದಲ್ಲಿ ನಡದಿದೆ.

ಜನವರಿ 29 ರ ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಗಳೂರಿನ ಸರ್ಜಾಪುರದಲ್ಲಿ ಈ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದೆ.

ಈಸ್ಟ್ ಬೆಂಗಳೂರಿನ ಸಿಟಿಜನ್ ಮೂವ್ ಮೆಂಟ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಬೈಕ್ ಸವಾರ ಸುಮಾರು 5 ಕಿಲೋಮೀಟರ್ ವರೆಗೆ ಕಾರನ್ನು ಚೇಸ್ ಮಾಡಿ ಕಾರಿನಲ್ಲಿದ್ದ ದಂಪತಿಯನ್ನು ಎದುರಿಸುತ್ತಿರುವ ದೃಶ್ಯವಿದೆ. ಉಪ ಪೊಲೀಸ್ ಆಯುಕ್ತ (ವೈಟ್‌ಫೀಲ್ಡ್) ಪ್ರಕಾರ, ಘಟನೆಯ ಸಮಯದಲ್ಲಿ ಎಸ್ ಗಿರೀಶ್, ಅಂಕಿತಾ ಜೈಸ್ವಾಲ್ ಮತ್ತು ಕುಶ್ ಜೈಸ್ವಾಲ್ ಅವರು ತಮ್ಮ ಕಾರಿನಲ್ಲಿ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ತಮ್ಮ ಅಪಾರ್ಟ್ಮೆಂಟ್ಗೆ ಹಿಂತಿರುಗುತ್ತಿದ್ದರು.

“ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಸೋಫಾಸ್ ಮತ್ತು ಮೋರ್ ಬಳಿ ಸರ್ಜಾಪುರ ರಸ್ತೆಯಲ್ಲಿ ಭಯಾನಕ ಘಟನೆ ವರದಿಯಾಗಿದೆ. ದುಷ್ಕರ್ಮಿಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದ್ದಾರೆ. ಚಿಕ್ಕನಾಯಕನಹಳ್ಳಿಯಲ್ಲಿರುವ ತಮ್ಮ ಸೊಸೈಟಿ ತನಕ 5 ಕಿ.ಮೀ ದೂರ ಕಾರನ್ನು ಹಿಂಬಾಲಿಸಿದ್ದಾರೆ. ರಾತ್ರಿಯಲ್ಲಿ ನಿಮ್ಮ ಕಾರನ್ನು ತೆರೆಯಬೇಡಿ. ಡ್ಯಾಶ್ ಕ್ಯಾಮ್ ಬಳಸಿ” ಎಂದು ಟ್ವೀಟ್ ನಲ್ಲಿ ತಿಳಿಸಲಾಗಿದೆ.

ವೀಡಿಯೊದಲ್ಲಿ, ಕಾರು ರಸ್ತೆಯೊಂದರಲ್ಲಿ ಚಲಿಸುತ್ತಿರುವುದು ಕಂಡುಬಂದಿದೆ. ಸ್ವಲ್ಪ ಸಮಯದ ನಂತರ ಬೈಕ್‌ನಲ್ಲಿ ಇಬ್ಬರು ವ್ಯಕ್ತಿಗಳು ಕಾರಿನ ಕಡೆಗೆ ಬರುತ್ತಿರುವುದು ಕಂಡುಬಂದಿದೆ. ನಂತರ ಅವರು ಉದ್ದೇಶಪೂರ್ವಕವಾಗಿ ಕಾರಿನ ಮುಂಭಾಗದಲ್ಲಿ ಡಿಕ್ಕಿ ಹೊಡೆದಿರುವುದು ಕಂಡುಬಂದಿದೆ. ಕಾರಿನ ಡ್ಯಾಶ್ ಕ್ಯಾಮ್‌ನಲ್ಲಿ ಸಂಪೂರ್ಣ ದೃಶ್ಯಗಳು ದಾಖಲಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!