Friday, July 1, 2022

Latest Posts

ವಿವಿಧ ಬಿತ್ತನೇ ಬೀಜಗಳ ದಾಸ್ತಾನು ಮಳಿಗೆಗಳಿಗೆ ಜಾಗೃತ ದಳ ಭೇಟಿ: ಅಕ್ರಮ ಬೀಜ-ಗೊಬ್ಬರ ದಾಸ್ತಾನು ಜಪ್ತಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ, ಧಾರವಾಡ:

ಹುಬ್ಬಳ್ಳಿ ಶಹರದ ಗೋಕುಲ ಕೈಗಾರಿಕಾ ವಸಾಹತುವಿನಲ್ಲಿ ವಿವಿಧ ಬಿತ್ತನೇ ಬೀಜಗಳ ದಾಸ್ತಾನು ಮಳಿಗೆಗಳಿಗೆ ಕೃಷಿ ಇಲಾಖೆಯ ಜಾಗೃತದಳದ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪ್ರತಿ ಮಳಿಗೆಗೆ ಭೇಟಿನೀಡಿ, ಬಿತ್ತನೆ ಬೀಜದ ಮಾರಾಟದ ಪರವಾನಿಗೆ ಪತ್ರ (ಲೈಸೆನ್ಸ್), ದಾಸ್ತಾನು ವಿವರಗಳು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸದಿರುವ ಇತ್ಯಾದಿ ಕುರಿತಂತೆ ಪರಿಶೀಲನೆ ನಡೆಸಿದರು.
ಅಲ್ಲದೇ, ಉಲ್ಲಂಘಿಸಿದ ಕೆಲವು ಮಳಿಗೆಗಳನ್ನು ವಿವರವಾಗಿ ಪರಿಶೀಲಿಸಿ, ಕಾನೂನಾತ್ಮಕವಾಗಿ ಸೂಕ್ತ ಕ್ರಮ ವಹಿಸಲಾಗಿದೆ. ಜಾಗೃತ ದಳದ ಅಧಿಕಾರಿಗಳು ಅನಧಿಕೃತ ಬಿತ್ತನೆ ಬೀಜ ಜಪ್ತಿ ಮಾಡಿದ್ದಾರೆ.
ರಾಜೇಂದ್ರ ಅಗ್ರೀ ಜನೆಟಿಕ್ಸ್ ಪ್ರೈ.ಲೀ.ನಲ್ಲಿ ಸಫೇದ್ ಷೇರ್ ಎಂಬ ಹೆಸರಿನ 800 ಪ್ಯಾಕೇಟ್ ಹೈ. ಬಿಟಿ ಹತ್ತಿ (ಮೌಲ್ಯ ರೂ.6 ಲಕ್ಷ) ಬಿತ್ತನೆ ಬೀಜದ ಮಾರಾಟದ ಲೈಸನ್ಸ್ ಪಡೆಯದೆ ಅನಧೀಕೃತ ದಾಸ್ತಾನು ಕಂಡುಬoದಿದೆ.
ಮಾರಾಟ ಮಾಡುತ್ತಿವ ಈ ಬಿತ್ತನೆ ಬೀಜವನ್ನು ಜಪ್ತಿ ಮಾಡಿ, ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಕ್ರಮ ವಹಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೆಶಕ ರಾಜಶೇಖರ ಬಿಜಾಪೂರ ತಿಳಿಸಿದ್ದಾರೆ.
ಮೆ. ಪವನ ಮಾರ್ಕೆಟರ್ಸ್ ಮಳಿಗೆಯಲ್ಲಿ ಹೈಬ್ರೀಡ್ ಗೋವಿನಜೋಳದ ತಳಿಗಳಾದ ‘ಆಪ್ತಮಿತ್ರ’, ‘ಎಡುರಾ’ ಹಾಗೂ ‘ಗೋಲ್ಡ್ ಮೈನ್’ಗಳನ್ನು ದಾಸ್ತಾನಿದ್ದು, ಮಾರಾಟ ಮಾಡಿರುವುದು ಕೂಡ ಕಂಡುಬoದಿರುತ್ತದೆ.
ಅಲ್ಲದೇ, ಜಾಗೃತ ದಳದ ಅಧಿಕಾರಿಗಳು ಈ ಮಳಿಗೆಯಲ್ಲಿ ರೂ.14 ಲಕ್ಷ ಮೌಲ್ಯದ 70 ಕ್ವಿಂಟಾಲ್ ಬೀಜಗಳನ್ನು ಜಪ್ತಿ ಮಾಡಿ, ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಕ್ರಮ ವಹಿಸಲಾಗಿದೆ.
ಅಲ್ಲದೇ, ವಿವಿಧ ಬಿತ್ತನೆ ಬೀಜಗಳಾದ ಹೈ.ಬಿಟಿ ಹತ್ತಿ 35.68 ಕ್ವಿಂ, ಹೈ.ಜೋಳ 5.58 ಕ್ವಿಂ, ಹೈ.ಸಜ್ಜೆ 16.92 ಕ್ವಿಂ. ಒಟ್ಟಾರೆ ರೂ. 63 ಲಕ್ಷ ಮೌಲ್ಯದ ಅನಧೀಕೃತ ಬೀಜ ಜಪ್ತಿ ಮಾಡಿ, ಪ್ರಕರಣ ದಾಖಲಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss