ಅನನ್ಯಾ ಪಾಂಡೆ ಮಡಿಲಲ್ಲಿ ವಿಜಯ್‌ ದೇವರಕೊಂಡ: ಇದೆಂಥಾ ಪ್ರಮೋಷನ್‌ ಗುರುವೇ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿರುವ ಪುರಿ ಜಗನ್ನಾಥ್ ನಿರ್ದೇಶನದ ಚಿತ್ರ ಲೈಗರ್. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ಮತ್ತು ಹಾಡುಗಳಿಂದ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆಗಳು ಹೆಚ್ಚಿವೆ. ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಕಿಕ್ ಬಾಕ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ವಿಶ್ವ ಬಾಕ್ಸಿಂಗ್ ಚಾಂಪಿಯನ್ ಮೈಕ್ ಟೈಸನ್ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರಕ್ಕೆ ಭಾರೀ ಪ್ರಚಾರ ಸಿಕ್ಕಿದೆ. ಲೈಗರ್ ಚಿತ್ರ ಆಗಸ್ಟ್ 25 ರಂದು ಬಿಡುಗಡೆಯಾಗಕಿರುವುದರಿಂದ ಚಿತ್ರತಂಡ ಪ್ರಚಾರ ಕಾರ್ಯ ಶುರು ಮಾಡಿದೆ.

ವಿಜಯ್ ಮತ್ತು ಅನನ್ಯಾ ಮುಂಬೈ ಲೋಕಲ್ ರೈಲಿನಲ್ಲಿ ಪ್ರಚಾರ ನಡೆಸಿದ್ದಾರೆ. ಲೋಕಲ್ ರೈಲಿನಲ್ಲಿದ್ದ ಜನರೊಂದಿಗೆ ಸ್ವಲ್ಪ ಹೊತ್ತು ಹರಟೆ ಹೊಡೆದು ರೈಲಿನಲ್ಲಿ ಹಾಡಿಗೆ ಹೆಜ್ಜೆ ಹಾಕಿದರು. ಆ ನಂತರ ವಿಜಯ್ ಅನನ್ಯಾಳ ಮಡಿಲಲ್ಲಿ ಸ್ವಲ್ಪ ಹೊತ್ತು ಮಲಗಿ ವಿಶ್ರಾಂತಿ ಪಡೆದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ.

ಸಿನಿಮಾ ಪ್ರಚಾರದ ಭಾಗವಾಗಿ ಈ ರೀತಿ ಪೋಸ್‌ ನೀಡಿರುವುದಾಗಿ ಅನನ್ಯಾ ಇನ್ಸ್‌ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದಾರೆ. ಪೋಸ್ಟ್‌ ನೋಡಿದ ನೆಟ್ಟಿಗರು ಇದೆಂಥಾ ಪ್ರಮೋಷನ್ಸ್‌ ಗುರುವೇ, ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.  ಹೇಗಾದರೂ ಮಾಡಿ  ಈ ಚಿತ್ರದ ಮೂಲಕ ದೊಡ್ಡ ಹಿಟ್ ಗಳಿಸುವ ನಿರೀಕ್ಷೆಯಲ್ಲಿದ್ದಾರೆ ವಿಜಯ್. ಈ ನಿಟ್ಟಿನಲ್ಲಿ ಸಖತ್ ಪ್ರಚಾರವನ್ನೂ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!