ಅಂಗಾಗ ದಾನಕ್ಕೆ ನೋಂದಣಿ ಮಾಡಿಸಿದ ವಿಜಯ್ ದೇವರಕೊಂಡ, ತಾಯಿ ಕೂಡ ಸಾಥ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ವಿಜಯ್ ದೇವರಕೊಂಡ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಿದ್ದು, ಸ್ವತಃ ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿಸಿದ್ದಾರೆ. ಉತ್ತಮ ಉದ್ದೇಶವಿರುವ ಮಗನ ಈ ಕೆಲಸಕ್ಕೆ ತಾಯಿ ಕೂಡ ಸಾಥ್ ನೀಡಿದ್ದು, ಅವರೂ ಅಂಗಾಂಗ ದಾನಕ್ಕೆ ಸಹಿ ಮಾಡಿದ್ದಾರೆ.

Vijay Deverakonda tells Karan Johar why he won't reveal who he's dating |  Web Series - Hindustan Timesನಿಧನದ ನಂತರ ಅಂಗಾಂಗ ದಾನ ಮಾಡಿದರೆ ಇನ್ನೊಬ್ಬರಿಗೆ ಜೀವದಾನ ಮಾಡಿದಂತೆ ಆಗುತ್ತದೆ. ಇಂಥ ಪುಣ್ಯ ಕಾರ್ಯಕ್ಕೆ ಇಲ್ಲ ಎನ್ನುವುದಿಲ್ಲ. ಎಲ್ಲರೂ ಅಂಗಾಂಗ ದಾನ ಮಾಡಿ, ಇತರ ಜೀವಗಳಿಗೆ ಜೀವನ ನೀಡಿ ಎಂದು ದೇವರಕೊಂಡ ಮನವಿ ಮಾಡಿದ್ದಾರೆ.

Vijay Deverakonda promises to donate all his organs: 'My mother and I have  registered to donate our organs' | Entertainment News,The Indian Expressದಾನಿಗಳ ಕಾರಣದಿಂದ ಸಾಕಷ್ಟು ಸರ್ಜರಿಗಳು ನಡೆಯುತ್ತಿವೆ. ಸಾಕಷ್ಟು ಮಂದಿ ಜೀವ ಉಳಿಯುತ್ತದೆ. ಅಂಗಾಂಗ ದಾನದ ಬಗ್ಗೆ ಜಾಗೃತಿ ಹೆಚ್ಚುತ್ತಿದ್ದು, ಅನೇಕರು ದಾನಕ್ಕೆ ಮುಂದಾಗುತ್ತಿದ್ದಾರೆ. ನನ್ನ ಬದುಕು ಅಂತ್ಯವಾದಮೇಲೂ ಇನ್ನೊಬ್ಬರು ಬದುಕಿನ ಭಾಗವಾಗಲು ಅವಕಾಶ ಸಿಗುವುದಾದರೆ ಅದನ್ನು ಬೇಡ ಎನ್ನಲಾರೆ ಎಂದು ವಿಜಯ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!