ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ತಮಿಳು ಚಿತ್ರರಂಗದ ದಳಪತಿ ವಿಜಯ್, ಬಿಗಿಲ್, ಮಾಸ್ಟರ್ ಚಿತ್ರದ ಬಳಿಕ ಬೀಸ್ಟ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಿರ್ದೇಶಕ ವಂಶಿ ಪೈಡಿ ಯವರ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ.
ದಳಪತಿಯ 66ನೇ ಚಿತ್ರವಾಗಿ ಈ ಹೊಸ ಕಥೆ ಹೊರಬರಲಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನನ್ನು ಹೊಸ ಲುಕ್ ನಲ್ಲಿ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇಷ್ಟಕ್ಕೂ ಈ 66ನೇ ಚಿತ್ರದಲ್ಲಿ ಏನು ವಿಶೇಷ ಅಂತೀರಾ? ಇಲ್ಲಿದೆ ನೋಡಿ
ಬಹಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣ ಮಾಡಲು ನಿರ್ಮಾಪಕ ದಿಲ್ ರಾಜು ಸಿದ್ಧರಿದ್ದಾರೆ. ನಟ ವಿಜಯ್ ಬರೋಬ್ಬರಿ 120 ಕೋಟಿ ರೂ. ಸಂಭಾವನೆ ಪಡೆಲಿದ್ದಾರಂತೆ.
ಈಗಾಗಲೇ ಬೀಸ್ಟ್ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ಅವರೊಂದಿಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ನಟ ವಿಜಯ್ 100 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.