ವಿಜಯ ದಶಮಿ ಉತ್ಸವ: ಬಳ್ಳಾರಿಯಲ್ಲಿ ಆರ್ ಎಸ್ ಎಸ್ ಕಾರ್ಯಕರ್ತರಿಂದ ಪಂಥ ಸಂಚಲನ

ಹೊಸದಿಗಂತ ವರದಿ,ಬಳ್ಳಾರಿ:

ವಿಜಯ ದಶಮಿ ಉತ್ಸವ ಹಿನ್ನೆಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ಎಸ್) ಕಾರ್ಯಕರ್ತರು ನಗರದಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು.

ನಗರದ ಗಾಂಧಿನಗರ ಬಡಾವಣೆಯ ಬಾಲ ಭಾರತಿ ಶಾಲೆಯಿಂದ ಪ್ರಾರಂಭವಾದ ಆಕರ್ಷಕ ಪಥ ಸಂಚಲನ, ನಗರದ ವಿವಿಧ ರಸ್ತೆಗಳ ಮೂಲಕ ಸಂಚರಿಸಿತು.

ಇದಕ್ಕೂ ಮುನ್ನ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತದ ಪ್ರಾಂತ ಕಾರ್ಯವಾಹರಾದ ರಾಘವೇಂದ್ರ ಕಾಗವಾಡ ಅವರು ಮಾತನಾಡಿ, ಶಕ್ತಿ ಜ್ಞಾನ ಸಂಪನ್ನತೆಯನ್ನು ದೇವಿಯಲ್ಲಿ ಬೇಡುವ ಹಬ್ಬವೇ ವಿಜಯ ದಶಮಿ ಹಬ್ಬವಾಗಿದೆ. ಹಿಂದೂ ಸಮಾಜ ಮೃತ್ಯುಂಜಯ ಸಮಾಜ ಶಕ್ತಿಯ ಜೊತೆಗೆ ವಿವೇಕ ಮತ್ತು ಸಜ್ಜನಿಕೆ ದೊರೆತಾಗ ಮಾತ್ರ ಜಗತ್ತಿಗೆ ಸಜ್ಜನಿಕೆ ಸಿಗಲಿದೆ ಎಂದರು.

ಉದ್ಯಮಿ ಬ್ರಹ್ಮಯ್ಯ ನಾಯ್ಡು ಮಾತನಾಡಿದರು. ಈ ಸಮಾರಂಭದಲ್ಲಿ 414 ಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ನಡೆದ ಆಕರ್ಷಕ ಪಥಸಂಚಲನ ಅದ್ದೂರಿಯಿಂದ ನಡೆಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!