spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶಾಂತಾದುರ್ಗಾ ದೇವಾಲಯದಲ್ಲಿ ವಿಜಯದಶಮಿ ಸಂಭ್ರಮ: ಪಲ್ಲಕಿ ಮೆರವಣಿಗೆ

- Advertisement -Nitte

ಹೊಸ ದಿಗಂತ ವರದಿ,ಅಂಕೋಲಾ:

ತಾಲೂಕಿನ ಶ್ರೀ ಶಾಂತಾದುರ್ಗಾ ದೇವಾಲಯದಲ್ಲಿ ವಿಜಯದಶಮಿ ಪ್ರಯುಕ್ತ ಬನ್ನಿ ಮಂಟಪ ಪೂಜೆಯೊಂದಿಗೆ ವಿಶೇಷ ದಸರಾ ಕಾರ್ಯಕ್ರಮ ನಡೆಯಿತು.
ದೊಡ್ಡ ದೇವರು ಎಂದು ಖ್ಯಾತಿ ಪಡೆದಿರುವ ಶ್ರೀವೆಂಕಟರಮಣ ದೇವರ ಪಲ್ಲಕಿ ಮೆರವಣಿಗೆ ಶಾಂತಾದುರ್ಗಾ ದೇವಾಲಯಕ್ಕೆ ಆಗಮಿಸಿ ಶ್ರೀ ಶಾಂತಾದುರ್ಗಾ ದೇವಿಯ ಪಲ್ಲಕಿಯೊಂದಿಗೆ ಪೂಜೆಯನ್ನು ಸ್ವೀಕರಿಸಲಾಯಿತು.
ಬನ್ನಿ ಮಂಟಪದ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಭಕ್ತರು ಬನ್ನಿ, ಶಮಿಪತ್ರೆಯ ಎಲೆಗಳನ್ನು ಪರಸ್ಪರ ಹಂಚಿ ದಸರಾ ಹಬ್ಬದ ಶುಭಾಶಯಗಳನ್ನು ಕೋರಿದರು.
ವಿಜಯ ದಶಮಿಯ ನಿಮಿತ್ತ ನೂರಾರು ಜನ ಭಕ್ತರು ಆಗಮಿಸಿ ಶ್ರೀ ಶಾಂತಾದುರ್ಗಾ ದೇವಿಯ ದರ್ಶನ ಪಡೆದು ವಿವಿಧ ಸೇವೆಗಳನ್ನು ಅರ್ಪಿಸಿದರು.
ತಾಲೂಕಿನ ಶ್ರೀ ಆರ್ಯಾದುರ್ಗ, ಶ್ರೀ ಕುಂಡೋದರಿ ಮಹಮಾಯಾ, ದುರ್ಗಾದೇವಿ ಮಂದಿರ, ಹಲವು ಗ್ರಾಮಗಳ ಮಹಾಸತಿ ದೇವಾಲಯಗಳು, ಅವರ್ಸಾದ ಕಾತ್ಯಾಯಿನಿ ಬಾಣೇಶ್ವರ ದೇವಸ್ಥಾನ ಮೊದಲಾದ ಕಡೆಗಳಲ್ಲಿ ಅತ್ಯಂತ ಭಕ್ತಿ ಭಾವಗಳಿಂದ ಸರಳವಾಗಿ ನವರಾತ್ರಿ ಮತ್ತು ದಸರಾ ಉತ್ಸವ ಆಚರಿಸಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss